Kannada NewsKarnataka NewsNational

*216 ಗಂಟೆ ಸುಧೀರ್ಘ ಭರತನಾಟ್ಯ ಪ್ರದರ್ಶನ: ಕಡಲ ಸುಂದರಿಯ ವಿಶ್ವ ದಾಖಲೆ*

ಪ್ರಗತಿವಾಹಿನಿ ಸುದ್ದಿ: ಕಡಲ ಕುವರಿ ತನ್ನ ನಿರಂತರ ಪ್ರಯತ್ನದ ಮೂಲಕ 216 ಗಂಟೆ ಭರತನ ನಾಟ್ಯ ಪ್ರದರ್ಶನ ಮಾಡಿ ವಿಶ್ವ ದಾಖಲೆ ಮಾಡಿ ಎಲ್ಲರ ಗಮನ ಸೇಳೆದಿದ್ದಾರೆ.‌

ಉಡುಪಿಯ ವಿದುಷಿ ದೀಕ್ಷಾ ಎಂಬ ಯುವತಿ ಸುದೀರ್ಘ 216 ಗಂಟೆ ಅಂದರೆ ಸತತ 9 ದಿನಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾಡ್ಸ್ ನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. 

ವಿದುಷಿ ದೀಕ್ಷಾ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪದವಿ ಕಾಲೇಜಿನಲ್ಲಿ ಆ. 21 ರಂದು ಮಧ್ಯಾಹ್ನ 3.30 ಗಂಟೆಗೆ ಭರತನಾಟ್ಯದ ಪ್ರದರ್ಶನವನ್ನು ಆರಂಭಿಸಿ, ಆ. 30 ರ ಮಧ್ಯಾಹ್ನ 3.30ಕ್ಕೆ ಪೂರ್ಣಗೊಳಿಸಿ, ಈ ಮೂಲಕ ಗೋಲ್ಡನ್ ಬುಕ್ ಆಫ್‌ ವರ್ಲ್ಡ್ ರೆಕಾಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾ ಸತತ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ವಿದುಷಿ ದೀಕ್ಷಾ ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿ ಹೊಸ ದಾಖಲೆ ಬರೆದಿದ್ದಾರೆ.

Home add -Advt

Related Articles

Back to top button