ಕೊರೊನಾ ಕರ್ತವ್ಯದಲ್ಲಿದ್ದ ಹೆಲ್ತ್ ಇನ್ಸ್ ಪೆಕ್ಟರ್ ಸಾವು

ಪ್ರಗತಿವಾಹಿನಿ ಸುದ್ದಿ; ಕೊಲಾರ: ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ತವ್ಯದಲ್ಲಿದ್ದ ಆರೋಗ್ಯ ನಿರೀಕ್ಷಕ ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಣಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಸರವಣಂ (45) ಮೃತ ಪಟ್ಟ ಕಿರಿಯ ಆರೋಗ್ಯ ನಿರೀಕ್ಷಕ. ಕೊರೊನಾ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡ ದಿನದಿಂದ ಮುಳಬಾಗಿಲು ತಾಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರವಣಂ ಕೆಲಸ ಮಾಡುತ್ತಿದ್ದರು.

Home add -Advt

ನಿನ್ನೆ ರಾತ್ರಿ ಕೂಡ ಸರವಣಂ ಕರ್ತವ್ಯದಲ್ಲಿದ್ದರು. ಆದರೆ ಈ ವೇಳೆ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಸರವಣಂ ಅವರು ಮೃತಪಟ್ಟಿದ್ದರು.

Related Articles

Back to top button