*ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಯೂಸ್ ಆಂಡ್ ಥ್ರೋ ಮಾಡಿದೆ*: *ಆರ್.ಅಶೋಕ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆನ್ನಿಗೆ ಚೂರಿ ಹಾಕಿದೆ. ಈಗ ಕೋರ್ಟ್ ಮೆಟ್ಟಿಲೇರುವಂತೆ ಮಾಡಿ, ಯೂಸ್ ಆಂಡ್ ಥ್ರೋ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಪಕ್ಷಕ್ಕೆ ಕೃತಜ್ಞತೆ ಎಂಬುದಿಲ್ಲ. ಪಾಪ ಸಿದ್ದರಾಮಯ್ಯನವರನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ನಾನು ಬಹಳ ನೋವಿನಿಂದ, ಒಲ್ಲದ ಮನಸ್ಸಿನಿಂದ ಹೇಳ್ತಿದ್ದೀನಿ. ಸಿದ್ದರಾಮಯ್ಯ ದೇವರಾಜ ಅರಸು ಅವರ ದಾಖಲೆ ಮುರಿದವರು. ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದವರು, ಅನ್ನರಾಮಯ್ಯ ಅವರು. ಆದರೆ ಇವತ್ತು ಸಿದ್ದರಾಮಯ್ಯ ಅವರಿಗೆ ಕೋರ್ಟ್ ಮೆಟ್ಟಿಲೇರುವ ನೋವು ಕೊಟ್ಟಿದ್ದೆ ಕಾಂಗ್ರೆಸ್ ಎಂದರು.
ಕೃತಜ್ಞತೆ ಇಲ್ಲದ ಕಾಂಗ್ರೆಸ್, ಕಪಟ ಕಾಂಗ್ರೆಸ್, ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಇದು. ತಡೆಯಾಜ್ಞೆ ಕೋರಿ ಸಿದ್ದರಾಮಯ್ಯ ಕೋರ್ಟ್ ಮೆಟ್ಟಿಲೇರುವ ದಯನೀಯ ಸ್ಥಿತಿಗೆ ತಂದಿದ್ದಾರೆ. ಅವರನ್ನು ಯೂಸ್ ಆಂಡ್ ಥ್ರೋ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್ ಬಗ್ಗೆ, ವಿಡಿಯೋಗಳ ಬಗ್ಗೆ ಕೂಡಲೇ ಎಫ್‌ಐಆರ್ ಆಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರು ಸರ್ಕಾರದ ಬಿಡಿಗಾಸಿನ ಹಣವನ್ನು ವಾಪಸ್ಸು ಕೊಡ್ತಿದ್ದಾರೆ. ಇದ್ಯಾವುದರ ಬಗ್ಗೆ ಗಮನ ಇಲ್ಲದೇ ಕಾಂಗ್ರೆಸ್ ಸರ್ಕಾರ ಈ ಸ್ಟಿಂಗ್ ಆಪರೇಷನ್, ಸಿಡಿಯಲ್ಲೇ ಮುಳುಗಿ ಹೋಗಿದೆ. ಡಿ.ಕೆ ಶಿವಕುಮಾರ್ ಸಿಎಂ ಆಗಿ ದೆಹಲಿಯಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ. ರಾಜ್ಯದ ಜನರ ಬಗ್ಗೆ ಒಂಚೂರು ಕಾಳಜಿ ಇಲ್ಲದೇ, ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರೆಂದು ಇದೇ ಚರ್ಚೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




