ಪ್ರಗತಿವಾಹಿನಿ ಸುದ್ದಿ: ಅಂತಾರಾಷ್ಟ್ರೀಯ ಸಾಗರ ಗಡಿ ರೇಖೆ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು ಪಂಬನ್ ಮತ್ತು ತಂಗಚಿಮಾಡಂನಿಂದ 23 ಮೀನುಗಾರರನ್ನು ಬಂಧಿಸಿ ಮೂರು ದೋಣಿಗಳನ್ನು ವಶಪಡಿಸಿಕೊಂಡಿದೆ.
ಬಂಧಿತ ಎಲ್ಲ 23 ಮೀನುಗಾರರು ರಾಮೇಶ್ವರಂನಿಂದ ಮೀನುಗಾರಿಕೆಗೆ ತೆರಳಿದ್ದು, ತನ್ನ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಿ, ಅವರನ್ನು ಜಾಫ್ತಾದ ಮಯಿತಿತ್ತಿ ನೆಲೆಗೆ ಕರೆದೊಯ್ದು ಸ್ಥಳೀಯ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಜೊತೆಗೆ ಮೂರು ದೋಣಿಗಳ ಪೈಕಿ ಎರಡು ದೋಣಿಗಳು ಜೆ ಸಹಾಯರಾಜ್ ಮತ್ತು ಜೆ ಗೀತನ್ ಅವರಿಗೆ ಸೇರಿದವು ಮತ್ತು ಮೂರನೆಯದು ಬಿ ರಾಜಾ ಅವರಿಗೆ ಸೇರಿದ ನೋಂದಣಿಯಾಗದ ಹಡಗು ಎಂದು ತಿಳಿದುಬಂದಿದೆ. 2024ರಲ್ಲಿ ಇಲ್ಲಿಯವರೆಗೆ ಬಂಧಿತ ಭಾರತೀಯ ಮೀನುಗಾರರ ಸಂಖ್ಯೆ 485 ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.
ರಾಮೇಶ್ವರಂನಲ್ಲಿರುವ ಮೀನುಗಾರರ ಸಂಘಗಳು ಶ್ರೀಲಂಕಾದ ನಿರಂತರ ಬಂಧನವನ್ನು ಖಂಡಿಸಿವೆ ಮತ್ತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಮೀನುಗಾರರ ಬಿಡುಗಡೆಗೆ ಒತ್ತಾಯಿಸಿದ್ದು ಮಂಗಳವಾರ ಪಂಬನ್ ಸೇತುವೆ ಬಳಿ ಬೃಹತ್ ರಸ್ತೆ ತಡೆ ನಡೆಸುವುದಾಗಿ ಮೀನುಗಾರರು ಘೋಷಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ