ಸಂಕೇಶ್ವರದ ಮುನ್ಸಿಪಾಲ್ಟಿಯ 4 ಸಿಬ್ಬಂದಿಗೆ ಕೊರೋನಾ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶುಕ್ರವಾರ ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಕೊರೋನಾಕ್ಕೆ ಬಲಿಯಾಗಿದ್ದಾರೆ.
ಎಲ್ಲರೂ ಪುರುಷರಾಗಿದ್ದು, ಬೆಳಗಾವಿಯ 68 ವರ್ಷದ ವ್ಯಕ್ತಿ, ಅಥಣಿಯ 48 ವರ್ಷ ಮತ್ತು 62 ವರ್ಷದ ವ್ಯಕ್ತಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ಚಿಕ್ಕೋಡಿಯ 24 ವರ್ಷದ ಯುವಕ ಕೂಡ ಕೊರೋನಾಕ್ಕೆ ಬಲಿಯಾಗಿದ್ದಾನೆ.
ಶುಕ್ರವಾರ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟೂ 95 ಜನರಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ 7 ಜನರು ಸೇರಿ 11 ಜನ ಗೋಕಾಕ ತಾಲೂಕಿನವರು. ಕೌಜಲಗಿಯ 16 ಹಾಗೂ 18 ವರ್ಷದ ಯುವತಿಯರು ಸೇರಿ 6 ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಸೋಂಕು ಪತ್ತೆಯಾಗಿದೆ. 7 ಜನರು ಅಥಣಿ ತಾಲೂಕಿನವರು. 12 ಜನರು ರಾಮದುರ್ಗ ತಾಲೂಕಿನವರು. ಮೂವರು ರಾಯಬಾಗ ತಾಲೂಕಿನವರು.
ಬೆಳಗಾವಿಯ ಬಸ್ ನಿಲ್ದಾಣದ ಹತ್ತಿರದ ಓರ್ವ, ಉಮೇಶ ನಗರದ ಓರ್ವ, ವಂಟಮೂರಿ ಕಾಲನಿಯ 80 ವರ್ಷದ ಮಹಿಳೆ, ಸುಳೇಬಾವಿಯ ಓರ್ವ, ಲಕ್ಷ್ಮಿ ನಗರದ 60 ವರ್ಷದ ಮಹಿಳೆ, ಹಿಂಜಲಗಾ ಜೈಲಿನ 4, ಭಾಗ್ಯನಗರದ 40 ವರ್ಷದ ಮಹಿಳೆ, ಟಿಳಕವಾಡಿಯ ಓರ್ವ, ಹಿಂದವಾಡಿಯ ಓರ್ವ, ಕಾವೇರಿ ನಗರದ 3, ಫೈರ್ ಸ್ಟೇಶನ್ ನ ಓರ್ವ, ಜೆಎನ್ಎಂಸಿ ಕ್ವಾಟರ್ಸ್ ನ ಓರ್ವ, ಸಾಂಬ್ರಾ ಏರ್ ಫೋರ್ಸ್ ಸ್ಟೇಶನ್ ನ 14, ವೀರಭದ್ರ ನಗರದ ಓರ್ವ, ಬಿಜಗರ್ಣಿಯ ನಾಲ್ವರಿಗೆ, ಸಂಕೇಶ್ವರದ ಮುನ್ಸಿಪಾಲ್ಟಿಯ 4 ಸಿಬ್ಬಂದಿ, ಕಿತ್ತೂರಿನ 1, ಲೋಂಡಾದ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಸೋಂಕಿತರಲ್ಲಿ ಅಳಗವಾಡಿಯ 6 ವರ್ಷದ ಹಾಗೂ ಕೌಜಲಗಿಯ 8 ವರ್ಷದ ಬಾಲಕ ಇದ್ದಾರೆ. 31 ಮಹಿಳೆಯರು ಸೋಂಕಿತರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ