Latest

*24 ವರ್ಷದ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿ*

ಪ್ರಗತಿವಾಹಿನಿ ಸುದ್ದಿ; ಕೊಡಗು: 24 ವರ್ಷದ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲದಲ್ಲಿ ನಡೆದಿದೆ.

ಬುಟ್ಟಿಯಂಡ ಆರತಿ (24) ಕೊಲೆಯಾದ ಯುವತಿ. ಅದೇ ಊರಿನ ತಿಮ್ಮಯ್ಯ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದ್ದು, ಆರೋಪಿ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ಯುವತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೆರೆಯ ಬಳಿ ವ್ಯಕ್ತಿಯೋರ್ವರ ಚಪ್ಪಲಿ, ಹೆಲ್ಮೆಟ್ ಪತ್ತೆಯಾಗಿದ್ದು, ಇದು ಶಂಕಿತ ಆರೋಪಿ ತಿಮ್ಮಯ್ಯನದ್ದೇ ಇರಬಹುದು ಎನ್ನಲಾಗಿದೆ. ಸ್ಥಳದಲ್ಲಿ ಚಪ್ಪಲಿ, ಹೆಲ್ಮೆಟ್, ಮದ್ಯದ ಬಾಟಲಿ, ವಿಷದ ಡಬಿ ಕೂಡ ಪತ್ತೆಯಾಗಿದೆ.

ಯುವತಿಯನ್ನು ಹತ್ಯೆಗೈದು ಆರೋಪಿ ತಿಮ್ಮಯ್ಯ ವಿಷ ಸೇವಿಸಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನಾ ಅಥವಾ ಅಲ್ಲಿಂದ ಎಸ್ಕೇಪ್ ಆಗಿದ್ದಾನಾ ಎಂಬ ಅನುಮಾನ ಮೂಡಿದ್ದು, ತಿಮ್ಮಯ್ಯನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

Home add -Advt

*ಹೋರಿ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಇಬ್ಬರು ಯುವಕರ ದುರ್ಮರಣ*

https://pragati.taskdun.com/bull-raceshivamoggatwo-youth-death/

Related Articles

Back to top button