Election NewsKannada NewsKarnataka NewsPolitics

*25-30 ಶಾಸಕರು ಕಾಂಗ್ರೆಸ್‌ಗೆ ಸೇರಲಿದ್ದಾರೆ: ಸಚಿವ ಡಿ ಸುಧಾಕರ್‌ ಹೊಸ ಬಾಂಬ್*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎನ್ನುವ ಸುದ್ದಿ ನಡುವೆ, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ 25 ರಿಂದ 30 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ ಎಂದು  ಸಚಿವ ಡಿ ಸುಧಾಕರ್‌ ಹೊಸ ಬಾಂಬ್ ಸಿಡಿಸಿದ್ದಾರೆ.‌

ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಸುಮಾರು 30 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಇನ್ನಷ್ಟು ಬಲಶಾಲಿಯಾಗಲಿದೆ ಎಂದು ಹೇಳಿದರು.

ಪ್ರಜ್ವಲ್‌ ರೇವಣ್ಣ ಕೇಸ್‌ ಅಲ್ಲಿ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ. ಕೇಂದ್ರ ಮನಸ್ಸು ಮಾಡಿದರೆ 1 ನಿಮಿಷದಲ್ಲಿ ಪ್ರಜ್ವಲ್‌ನನ್ನು ಹಿಡಿಯಬಹುದು. ಅಪರಾಧಿಗೆ ಡಿಪ್ಲೋಮೆಟಿಕ್‌ ಪಾಸ್‌ಪೋರ್ಟ್‌ ನೀಡಿದೆ. ತನಿಖಾ ಸಂಸ್ಥೆಗಳಿಂದ ಪಾಸ್‌ಪೋರ್ಟ್‌ ಕ್ಯಾನ್ಸಲ್‌ ಮಾಡಿಸಲಿ. ಆದರೆ ಅದನ್ನು ಎನ್‌ಡಿಎ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

Home add -Advt

ಇದೇ ಸಂದರ್ಭ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್‌ ಶೆಟ್ಟರ್‌ ಮಾಜಿ ಸಿಎಂ ಆಗಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಾನಿದ್ದೆ. ಕಾನೂನು ಸುವ್ಯವಸ್ಥೆ ಹಿಂದೆಯೂ ಹೇಗಿತ್ತು ಎಂಬುದನ್ನು ನಾನು ನೋಡಿದ್ದೇನೆ. ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ದಕ್ಷವಾಗಿದೆ ಎಂದು ಹೇಳಿದರು.

Related Articles

Back to top button