
ಪ್ರಗತಿವಾಹಿನಿ ಸುದ್ದಿ: ಗೋವಾ ಕ್ಲಬ್ ನಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ 25 ಜನ ಸಾವನ್ನಪ್ಪಿದ್ದು ಅದರಲ್ಲಿ ಬೆಂಗಳೂರಿನ ನಿವಾಸಿ ಕೂಡ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ ಥಣಿಸಂದ್ರದ ಹೆಗಡೆನಗರದ ನಿವಾಸಿ ಇಶಾಕ್(25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸದ್ಯ ಗೋವಾದಲ್ಲಿ ಮೃತದೇಹದ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು ಕುಟುಂಬಸ್ಥರು ರಾತ್ರಿಯೇ ಬೆಂಗಳೂರಿಗೆ ತರುವ ಪ್ರಯತ್ನದಲ್ಲಿದ್ದಾರೆ. ಐವರು ಸ್ನೇಹಿತರ ಜೊತೆ ಇಶಾಕ್ ಗೋವಾಗೆ ತೆರಳಿದ್ದರು.
ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಫ್ರೆಂಡ್ಸ್ ಜತೆ ಇಶಾಕ್ ಹೊರ ಬಂದಿದ್ದರು. ಮೊಬೈಲ್ ಟೇಬಲ್ ಮೇಲೆ ಬಿಟ್ಟು ಬಂದಿದ್ದೇನೆ ಅಂತಾ ಮತ್ತೆ ವಾಪಸ್ ಆಗಿದ್ದರು, ಈ ವೇಳೆ ಬೆಂಕಿ ಕೆನ್ನಾಲಗೆಗೆ ಸಿಲುಕಿ ಇಶಾಕ್ ಪ್ರಾಣ ಬಿಟ್ಟಿದ್ದಾರೆ.



