Kannada NewsKarnataka NewsNationalPolitics

*ಬಿ ರಿಪೋರ್ಟ್ ಸಲ್ಲಿಸಲು ಲಂಚ ಪಡೆಯುವಾಗ ಪಿಎಸ್ಐ ಆ್ಯಂಡ್ ಎಎಸ್ಐ ಲಾಕ್*

ಪ್ರಗತಿವಾಹಿನಿ ಸುದ್ದಿ: ಪ್ರಕರಣವೊಂದರ ಬಿ ರಿಪೋರ್ಟ್ ಸಲ್ಲಿಸಲು 1 ಲಕ್ಷ ರೂ ಬೇಡಿಕೆ ಇಟ್ಟು 70 ಸಾವಿರ ರೂ ಲಂಚ ಪಡೆಯುವ ವೇಳೆ  ಪಿಎಸ್ಐ ಹಾಗೂ ಎಎಸ್ಐ ಇಬ್ಬರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್  ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶ್ ಇಬ್ಬರನ್ನು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Home add -Advt

ಚಿಕ್ಕಬಳ್ಳಾಪುರ ತಾಲೂಕಿನ ಮೋಟಲೂರು ಗ್ರಾಮದ ರಘು ಎಂಬಾತನ ಬಳಿ ಪ್ರಕರಣ ಒಂದರ ಬಿ ರಿಪೋರ್ಟ್ ಸಲ್ಲಿಕೆಗಾಗಿ 1 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ 70 ಸಾವಿರ ರೂಪಾಯಿ ಲಂಚ ಪಡೆಯುವಾಗ ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ಎಎಸ್‌ಐ ವೆಂಕಟೇಶ್ ರನ್ನು ರೆಡ್ ಅಂಡ್ ಆಗಿ ಹಿಡಿಯಲಾಗಿದೆ.

ಇನ್ನು ಪಿಎಸ್ಐ ಶರಣಪ್ಪ ಸೂಚನೆ ಮೇರೆಗೆ ಎಎಸ್‌ಐ ವೆಂಕಟೇಶ್ ಹಣ ಪಡೆದಿದ್ದಾರೆ ಎನ್ನಲಾಗಿದ್ದು ಪಿಎಸ್ಐ ಶರಣಪ್ಪನನ್ನ ಸಹ ವಶಕ್ಕೆ ಪಡೆಯಲಾಗಿದೆ.

Related Articles

Back to top button