Karnataka NewsLatest

ಎಚ್ಚರದಿಂದಿರಿ, ಕರ್ನಾಟಕದಲ್ಲಿ ಕೊರೋನಾದಿಂದ ಸಾವು 25,000

ಈ ಸುದ್ದಿ ಯಾರನ್ನೂ ಹೆದರಿಸಲಿಕ್ಕಲ್ಲ, ಜನರನ್ನು ಎಚ್ಚರಿಸಲಿಕ್ಕೆ 

25 ಸಾವಿರ ಅಮೂಲ್ಯ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. ಇನ್ನಾದರೂ ಎಲ್ಲರೂ ಎಚ್ಚರಿಕೆಯಿಂದ ಇರೋಣ. ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದೆ ಸುರಕ್ಷಿತವಾಗಿರೋಣ.

61,766 ಜನರು ಒಂದೇ ದಿನ ಆಸ್ಪತ್ರೆಯಿಂದ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆ ಶನಿವಾರದವರೆಗೆ 24,658 ಆಗಿದ್ದು, ಭಾನುವಾರ 25 ಸಾವಿರದ ಗಡಿ ದಾಟುವುದು ನಿಶ್ಚಿತ. ನಿತ್ಯ 400ಕ್ಕಿಂತ ಹೆಚ್ಚು ಜನರು ಕೊರೋನಾದಿಂದಾಗಿ ಕರ್ನಾಟಕದಲ್ಲಿ ಸಾವಿಗೀಡಾಗುತ್ತಿದ್ದಾರೆ.

ಶನಿವಾರ 31,183 ಜನರಿಗೆ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 61,766 ಜನರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಶನಿವಾರ 451 ಜನರು ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಒಟ್ಟೂ 23,98,925 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಪಾಸಿಟಿವಿಟಿ ರೇಟ್ ಶೇ.24.21. ಸಾವಿನ ಪ್ರಮಾಣ ಶೇ.1.44.

ಬೆಂಗಳೂರಿನಲ್ಲಿ ಶನಿವಾರ 8214 ಜನರಿಗೆ ಸೋಂಕು ದೃಢಪಟ್ಟಿದ್ದು, 200 ಜನರು ಸಾವಿಗೀಡಾಗಿದ್ದಾರೆ.

ಬೆಳಗಾವಿಯಲ್ಲಿ 1026 ಜನರಿಗೆ ಸೋಂಕು ಪತ್ತೆಯಾಗಿದ್ದು, 14 ಜನರು ಸಾವಿಗೀಡಾಗಿದ್ದಾರೆ.

ಉತ್ತರ ಕನ್ನಡದಲ್ಲಿ ಶನಿವಾರ 1357 ಜನರಿಗೆ ಸೋಂಕು ಪತ್ತೆಯಾಗಿದೆ. 20 ಜನರು ಸಾವಿಗೀಡಾಗಿದ್ದಾರೆ.

25 ಸಾವಿರ ಅಮೂಲ್ಯ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. ಇನ್ನಾದರೂ ಎಲ್ಲರೂ ಎಚ್ಚರಿಕೆಯಿಂದ ಇರೋಣ. ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದೆ ಸುರಕ್ಷಿತವಾಗಿರೋಣ.

ರಾಜ್ಯದ  ವಿವಿಧ ಜಿಲ್ಲೆಗಳ ಕೊರೋನಾ ಸ್ಥಿತಿಗತಿಯ ಸಮಗ್ರ ವಿವರ ಇಲ್ಲಿದೆ –

ಕನ್ನಡ  – 22-05-2021 HMB Kannada

ಇಂಗ್ಲೀಷ್ –  22-05-2021 HMB English

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಇಂದು 14 ಜನರ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button