Latest

ಮೋನಿಷಾ ರೋಪೇಟಾ ಪಾಕಿಸ್ತಾನದ ಮೊದಲ ಹಿಂದೂ ಮಹಿಳಾ ಪೊಲೀಸ್ ಅಧಿಕಾರಿ

ಪ್ರಗತಿ ವಾಹಿನಿ ಸುದ್ದಿ ಕರಾಚಿ –

೨೬ ವರ್ಷದ ಮನಿಷಾ ರೋಪೇಟಾ ಪಾಕಿಸ್ತಾನ ಮೊದಲ ಹಿಂದೂ ಮಹಿಳಾ ಡಿಎಸ್‌ಪಿ ಆಗಿ ನಿಯೋಜನೆಗೊಂಡಿದ್ದಾರೆ.

ಅಷ್ಟೇ ಅಲ್ಲ, ಸಿಂಧ್ ಪೊಲೀಸ್‌ನಲ್ಲಿ ಅಧಿಕೃತ ಸ್ಥಾನದಲ್ಲಿರುವ ಕೆಲವೇ ಮಹಿಳಾ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದಿಂದ ಪೊಲೀಸ್ ಉಪ ಅಧೀಕ್ಷಕರಾದ ಮೊದಲ ಮಹಿಳೆ ಎಂಬ ಕಾರಣಕ್ಕಾಗಿಯೂ ಗಮನ ಸೆಳೆದಿದ್ದಾರೆ.

 

ಪಾಕಿಸ್ತಾನದ ಪುರುಷ ಪ್ರಧಾನ ಸಮಾಜ ಮತ್ತು ಸಂಸ್ಕೃತಿಯಲ್ಲಿ, ಪೋಲೀಸ್ ಫೋರ್ಸ್‌ನಂತಹ ವೃತ್ತಿಗಳಿಗೆ ಮಹಿಳೆಯರು ಸೇರುವುದು ಕಷ್ಟಸಾಧ್ಯ.

“ಬಾಲ್ಯದಿಂದಲೂ, ನಾನು ಮತ್ತು ನನ್ನ ಸಹೋದರಿಯರು ಅದೇ ಹಳೆಯ ಪಿತೃಪ್ರಭುತ್ವದ ವ್ಯವಸ್ಥೆಯನ್ನು ನೋಡಿದ್ದೇವೆ, ಅಲ್ಲಿ ಹುಡುಗಿಯರು ಶಿಕ್ಷಣ ಪಡೆಯಲು ಮತ್ತು ಕೆಲಸ ಮಾಡಲು ಬಯಸಿದರೆ ಅದು ಹೆಚ್ಚೆಂದರೆ ಶಿಕ್ಷಕರು ಅಥವಾ ವೈದ್ಯ ವೃತ್ತಿಗೆ ಸೀಮಿತವಾಗಿತ್ತು ಎಂದು ರೋಪೇಟಾ ಹೇಳುತ್ತಾರೆ.

 

ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ರೋಪೆಟಾ, “ಉತ್ತಮ ಕುಟುಂಬದ ಹುಡುಗಿಯರು ಪೊಲೀಸ್ ವೃತ್ತಿ ಮಾಡಬಾರದು ಎಂಬ ಈ ಮನೋಭಾವ ಕೊನೆಗಾಣಬೇಕು. ನಮ್ಮ ಸಮಾಜದಲ್ಲಿ ಮಹಿಳೆಯರು ಹೆಚ್ಚು ತುಳಿತಕ್ಕೊಳಗಾಗಿದ್ದಾರೆ ಮತ್ತು ಅನೇಕ ಅಪರಾಧಗಳಿಗೆ ಗುರಿಯಾಗುತ್ತಾರೆ. ನಮ್ಮ ಸಮಾಜದಲ್ಲಿ ನಮಗೆ ’ರಕ್ಷಕ’ ಮಹಿಳೆಯರು ಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳುತ್ತಾರೆ.

 

ಪ್ರಸ್ತುತ ತರಬೇತಿಯಲ್ಲಿರುವ ರೋಪೇಟಾ ಅವರನ್ನು ಅಪರಾಧ ಪೀಡಿತ ಲಿಯಾರಿ ಪ್ರದೇಶದಲ್ಲಿ ನಿಯೋಜಿಸಲಾಗುವುದು.

ರೋಪೇಟಾ ಅವರ ಮೂವರು ಸಹೋದರಿಯರು ವೈದ್ಯರಾಗಿದ್ದು, ಆಕೆಯ ಕಿರಿಯ ಸಹೋದರ ಕೂಡ ವೈದ್ಯಕೀಯ ಓದುತ್ತಿದ್ದಾರೆ.

 

https://pragati.taskdun.com/film-and-entertainment/urfi-javednetted-dressswimsuit/

 

https://pragati.taskdun.com/latest/pub-liquorshops-instruction-adgp-karnataka-police/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button