Latest

ಡಿ.27, 28ರಂದು ಬೆಳಗಾವಿಯ ಕೆಲವೆಡೆ ವಿದ್ಯುತ್ ನಿಲುಗಡೆ

     
      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಂಡರ್ ಗ್ರೌಂಡ್ ಕೇಬಲ್ ಕೆಲಸದ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಕೆಲವೆಡೆ  ಗುರುವಾರ ಮತ್ತು ಶುಕ್ರವಾರ ವಿದ್ಯುತ್ ನಿಲುಗಡೆಯಾಗಲಿದೆ.
27ರಂದು ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆವರೆಗೆ ನಾನಾವಾಡಿ ಪ್ರದೇಶ, ಆಶ್ರಯವಾಡಿ, ಅಂಗಡಿ ಕಾಲೇಜು, ಬೆಲ್ಲಾವಿಸ್ತಾ ಅಪಾರ್ಟ್‌ಮೆಂಟ್, ಅಂಗಡಿ ಕಾಲೇಜು ರಸ್ತೆ, ಗಿಂಡೇ ಕಾಲನಿ, ಗೋವಾವೇಸ್, ಗುಡ್‌ಶೆಡ್ ರಸ್ತೆ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮುಖ ರಸ್ತೆ, ಹಿಂದವಾಡಿ, ಖಾನಾಪುರ ರಸ್ತೆ ಪ್ರದೇಶದಲ್ಲಿ, 28ರಂದು ಧಾಮಣೆ ರಸ್ತೆ, ನಿಜಾಮಿಯಾ ಕಾಲನಿ, ವಿಷ್ಣುಗಲ್ಲಿ, ಬಜಾರ ಗಲ್ಲಿ, ಶಹಾಪುರ ಪೊಲೀಸ್ ಠಾಣೆ, ರೈತ ಗಲ್ಲಿ, ದತ್ತ ಗಲ್ಲಿ, ವಜೇ ಗಲ್ಲಿ, ಚಾವಡಿ ಗಲ್ಲಿ, ವಡಗಾವಿ, ನಾರ್ವೇಕರ ಗಲ್ಲಿ, ನಾಥಪೈ ಸರ್ಕಲ್, ಪವಾರ ಗಲ್ಲಿ, ಬಿಚ್ಚು ಗಲ್ಲಿ, ಸರಾಫ್ ಗಲ್ಲಿ ಹಾಗೂ ಕಾಂಗ್ರೆಸ್ ರಸ್ತೆಯ ೧, ೨ನೇ ರೈಲ್ವೆ ಗೇಟ್, ಮರಾಠಾ ಕಾಲನಿ, ಎಸ್‌ವಿ ಕಾಲನಿ, ಕಾಂಗ್ರೆಸ್ ಬಾವಿ, ಲೇಲೆ ಗ್ರೌಂಡ್, ವ್ಯಾಕ್ಸಿನ್ ಡಿಪೋ, ರಾಣಾಪ್ರತಾಪ ರಸ್ತೆ, ಹಿಂದ ನಗರ, ಸಾವರ್ಕರ್ ರಸ್ತೆ, ಎಂ.ಜಿ. ರಸ್ತೆ, ನೆಹರು ರಸ್ತೆ, ರಾಯ್ ರಸ್ತೆ, ಅಗರ್ಕರ್ ರಸ್ತೆ, ಶಿವಾಜಿ ರಸ್ತೆ, ಕುಡುತುಕರ್ ಕಾಂಪೌಂಡ್, ಶಿವಾಜಿ ಎಂಜಿನಿಯರಿಂಗ್, ಪುರಾಣಿಕ ಟಿಸಿ, ಸೋಮವಾರ ಪೇಟೆ, ಆರ್‌ಪಿಡಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button