ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ವಿಪ್ರ ವೈದ್ಯ ವೇದಿಕೆಯು ವೈದ್ಯ ಸಮ್ಮೇಳನವನ್ನು ಏ.೨೮ ರಂದು ಬೆಳಗ್ಗೆ ೯.೩೦ ಗಂಟೆಗೆ ನಗರದ ಎನ್.ಆರ್. ಕಾಲೋನಿ ಶ್ರೀರಾಮ ಮಂದಿರ ಸಭಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ರಕ್ಯನಾಳ ತಜ್ಞ ಹಾಗೂ ವೇದಿಕೆ ಅಧ್ಯಕ್ಷ ಡಾ.ಮುರುಳಿಧರ್ ಮಾತನಾಡಿ, ವಿಪ್ರ ವೈದ್ಯ ವೇದಿಕೆಯು ಈ ಸಮುದಾಯದ ವೈದ್ಯರು ಸೇರಿಕೊಂಡು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದೇವೆ. ಆದರ ಅಂಗವಾಗಿ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು.
ವೈದ್ಯ ಸಮ್ಮೇಳನವು ಅಂದು ಬೆಳಗ್ಗೆ ೯.೩೦ ಕ್ಕೆ ಆರಂಭವಾಗಲಿದ್ದು, ಚೆನ್ನೈನ ನ್ಯೂರೊ ಸರ್ಜನ್ ಡಾ.ಎ.ವಿ.ಶ್ರೀನಿವಾಸನ್, ಹಾಗೂ ಜೀವನದಲ್ಲಿ ಮಾನವನ ಮೌಲ್ಯಗಳ ಕುರಿತು ಹಿರೆಮಗಳೂರು ಕಣ್ಣನ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. 400 ಕ್ಕೂ ಹೆಚ್ಚು ವಿಪ್ರ ಸಮುದಾಯದ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ವೇದಿಕೆ ಮೂಲಕ ಸಾರ್ವಜನಿಕರು ದೇವಸ್ಥಾನಗಳಲ್ಲಿ ಕ್ಯಾಂಪ್ ಆಯೋಜಿಸಲು ಅವಕಾಶ ಕಲ್ಪಿಸಿದರೆ ಅಂತಹ ಸ್ಥಳಗಳಲ್ಲಿ ಕ್ಯಾಪ್ ನಡೆಸಲಾಗುತ್ತದೆ. ಇದರಲ್ಲಿ ಕ್ಯಾನ್ಸರ್, ಡಯಾಬಿಟಿಸ್ ಮುಂತಾದ ರೋಗಗಳ ಬಗ್ಗೆ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರ ಸ್ಥಳದಲ್ಲಿ ಯಾರಾದರೂ ಶಿಬಿರ ಆಯೋಜಿಸಲು ಮುಂದೆ ಬಂದರೆ ಅಲ್ಲಿಯೂ ಕೂಡ ನಡೆಸಲಾಗುವುದು ಎಂದರು.
ನ್ಯೂರೋ ಸರ್ಜನ್ ಶರಣ್ ಶ್ರೀನಿವಾಸ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಚಂದ್ರಿಕಾ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ