
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರಾಮತೀರ್ಥ ನಗರದ ಬಡಾವಣೆಯನ್ನು ಸರ್ವತೋಮುಖ ಅಭಿವೃಧ್ದಿಗೊಳಿಸುವ ಸಲುವಾಗಿ ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬೆಳಗಾವಿ ಉತ್ತರ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿದ್ದು, ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸಿ ಚಾಲನೆ ನೀಡಲಾಗಿದೆ ಎಂದರು.
ಅದರಂತೆಯೇ ರಾಮತೀರ್ಥ ನಗರದಲ್ಲಿನ ಬಡಾವಣೆಗಳಲ್ಲಿ ಆರ್.ಸಿ.ಸಿ ಒಳಚರಂಡಿ ಕಾಮಗಾರಿ, ಆರ್.ಸಿ.ಸಿ ನಾಲಾ ನಿರ್ಮಾಣ, ರಸ್ತೆ ಅಭಿವೃದ್ದಿಗೊಳಿಸುವ ಕಾಮಗಾರಿ, ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ ಹಾಗೂ ಉದ್ಯಾನವನಗಳ ಅಭಿವೃಧ್ದಿಗೊಳಿಸಲು ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ ಟೆಂಡರ್ ಮಾಡಿಸಲಾಗಿದೆ ಎಂದರು.
ಟೆಂಡರ್ ಮುಗಿದ ತಕ್ಷಣ ಬಡಾವಣೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ