Kannada NewsKarnataka NewsLatest

ಕೆಎಲ್‌ಇ ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಫಾರ್ಮಾಕೋವಿಜಿಲೆನ್ಸ್ ದಿನಾಚರಣೆ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ :

ಔಷಧಗಳ ಪ್ರತಿಕೂಲ ಪರಿಣಾಮಗಳು ಮತ್ತು ಮೌಲ್ಯಮಾಪನದ ನಿಟ್ಟಿನಲ್ಲಿ ಆಯೋಜಿಸುವ ೨ನೇ ರಾಷ್ಟ್ರೀಯ ಫಾರ್ಮಾಕೋವಿಜಿಲೆನ್ಸ್ ದಿನಾಚರಣೆಯನ್ನು ಬೆಳಗಾವಿಯ ಕೆಎಲ್‌ಇ ಫಾರ್ಮಸಿ ಕಾಲೇಜಿನಲ್ಲಿ ಕೆಎಲ್‌ಇಸಿಪಿ-ಎಡಿಆರ್ ಮಾನಿಟರಿಂಗ್ ಸೆಂಟರ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ರೋಗಿಗಳಿಗೆ ಎಡಿಆರ್ ರಿಪೋರ್ಟ್ ನೀಡಲು ಪ್ರೋತ್ಸಾಹಿಸುವುದು ಈ ಬಾರಿಯ ಫಾರ್ಮಾಕೋವಿಜಿಲೆನ್ಸ್ ದಿನಾಚರಣೆಯ ಧ್ಯೇಯವಾಗಿದೆ. ಕಾಲೇಜಿನ ಎಡಿಆರ್ ಮಾನಿಟರಿಂಗ್ ಸೆಂಟರ್ ಸಮನ್ವಯಾಧಿಕಾರಿ ಡಾ.ಎಂ.ಎಸ್.ಗಣಾಚಾರಿ ಹಾಗೂ ಔಷಧ ಅಭ್ಯಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಗೀತಾಂಜಲಿ ಸಾಲಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಉಪಾಧ್ಯಕ್ಷ ಡಾ.ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಡಿಆರ್ ಮಾನಿಟರಿಂಗ್ ಸೆಂಟರ್‌ನ ಉಪ ಸಮನ್ವಯಾಧಿಕಾರಿ ಡಾ.ರಮೇಶ ಭಂಡಾರಿ ಉಪನ್ಯಾಸ ನೀಡಿದರು. ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಕ್ಲಿನಿಕಲ್ ಸರ್ವಿಸಸ್ ಆಡಳಿತಾಧಿಕಾರಿ ಡಾ.ರಾಜಶೇಖರ ಸೋಮನಟ್ಟಿ, ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಸುನೀಲ ಜಲಾಲಪುರೆ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ, ಕೆಎಲ್‌ಇ ಫಾರ್ಮಸಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಶಶಿಕಲಾ ವಾಲಿ ವಂದಿಸಿದರು.

https://pragati.taskdun.com/latest/inaugural-function-cmeadvanced-vestibular-disordershearing-awarenesscochlear-implant/

ತೀವ್ರತರ ಕಿವುಡುತನ ಪರಿಹಾರಕ್ಕೆ ಇಲ್ಲಿದೆ ಪರಿಹಾರ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button