Kannada NewsKarnataka NewsLatest

ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ ಸುಧಾರಣೆಗೆ 3.95 ಕೋಟಿ ರೂ. ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಸತತವಾಗಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಆರ್‌ಡಿಪಿಆರ್ ಇಲಾಖೆಯಿಂದ ೩.೯೫ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಸೋಮವಾರ ಸಂಜೆ ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಅವರು, ಅಡಿಬಟ್ಟಿ ಗ್ರಾಮದ ಬಸವನಗರ ರಸ್ತೆ ಸುಧಾರಣೆಗೆ ೨೫ ಲಕ್ಷ ರೂ, ಕಲಾರಕೊಪ್ಪ ಗ್ರಾಮದ ನಾಯ್ಕರ ತೋಟದ ರಸ್ತೆ ಸುಧಾರಣೆಗೆ ೧೮ ಲಕ್ಷ ರೂ, ವಡೇರಹಟ್ಟಿ ಗ್ರಾಮದ ಲಕ್ಷ್ಮೀದೇವಿ ಗುಡಿ ರಸ್ತೆ ಸುಧಾರಣೆಗೆ ೩೦ ಲಕ್ಷ ರೂ, ಕಲಾರಕೊಪ್ಪ-ಮೆಳವಂಕಿ ರಸ್ತೆ ಸುಧಾರಣೆಗೆ ೯ ಲಕ್ಷ ರೂ, ಸಂಗನಕೇರಿ-ರಾಜಾಪೂರ ರಸ್ತೆ ಸುಧಾರಣೆಗೆ ೧೫ ಲಕ್ಷ ರೂ, ಬೆಟಗೇರಿಯ ನಾಗಲಿಂಗೇಶ್ವರ ದೇವಸ್ಥಾನದ ರಸ್ತೆ ಸುಧಾರಣೆಗೆ ೩೦ ಲಕ್ಷ ರೂ, ಬಡಿಗವಾಡ-ದುರದುಂಡಿ ರಸ್ತೆ ಸುಧಾರಣೆಗೆ ೩೦ ಲಕ್ಷ ರೂ, ಬಗರನಾಳ ಗ್ರಾಮದಿಂದ ಕೊಪ್ಪ (ತಾಲೂಕಿನ ಹದ್ದಿವರೆಗೆ) ರಸ್ತೆ ಸುಧಾರಣೆಗೆ ೨೫ ಲಕ್ಷ ರೂ, ಕೆಮ್ಮನಕೋಲ ಗ್ರಾಮದಿಂದ ಬೆಟಗೇರಿ ಒಳಗಿನ ರಸ್ತೆ ಸುಧಾರಣೆಗೆ ೩೦ ಲಕ್ಷ ರೂ, ಬಸಳಿಗುಂದಿ ಗ್ರಾಮದ ಕೂಡು ರಸ್ತೆ ಸುಧಾರಣೆಗೆ ೨೩ ಲಕ್ಷ ರೂ, ಧರ್ಮಟ್ಟಿ-ಪಟಗುಂದಿ ಒಳಗಿನ ರಸ್ತೆ ಸುಧಾರಣೆಗೆ ೩೦ ಲಕ್ಷ ರೂ, ಉದಗಟ್ಟಿ-ಹುಣಶ್ಯಾಳ ಪಿಜಿ ರಸ್ತೆ ಸುಧಾರಣೆಗೆ ೩೫ ಲಕ್ಷ ರೂ, ತುಕ್ಕಾನಟ್ಟಿ ಗ್ರಾಮದಿಂದ ಕಂಕಣವಾಡಿ ರಸ್ತೆ(ತಾಲೂಕಿನ ಹದ್ದಿವರೆಗೆ) ಸುಧಾರಣೆಗೆ ೨೫ ಲಕ್ಷ ರೂ, ತುಕ್ಕಾನಟ್ಟಿ-ಕಂಕಣವಾಡಿ ರಸ್ತೆಯಿಂದ ಅರಣ್ಯಸಿದ್ಧೇಶ್ವರ ತೋಟದ ರಸ್ತೆ ಸುಧಾರಣೆಗೆ ೩೦ ಲಕ್ಷ ರೂ ಮತ್ತು ತಳಕಟ್ನಾಳ ಗ್ರಾಮದಿಂದ ಖಂಡ್ರಟ್ಟಿ ರಸ್ತೆ ಸುಧಾರಣೆ ಮಾಡಲಿಕ್ಕೆ ೪೦ ಲಕ್ಷ ರೂ.ಗಳು ಬಿಡುಗಡೆಯಾಗಿವೆ ಎಂದು ಹೇಳಿದ್ದಾರೆ.
ಶೀಘ್ರದಲ್ಲಿಯೇ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button