
ಪ್ರಗತಿವಾಹಿನಿ ಸುದ್ದಿ, ಖಾನಾಪುರ – ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶಾಸಕಿ ಅಂಜಲಿ ನಿಂಬಾಳಕರ್ ಖಾನಾಪುರ ಆಸ್ಪತ್ರೆಗೆ 3 ಅಂಬುಲನ್ಸ್ ಗಳನ್ನು ನೀಡಿದರು.
ಪೂಜೆ ಸಲ್ಲಿಸಿ ಅಂಬುಲೆನ್ಸ್ ಗಳನ್ನು ಹಸ್ತಾಂತರಿಸಿದ ಅವರು, ಸ್ವತಃ ನಗರದಲ್ಲಿ ಅಂಬುಲನ್ಸ್ ನ್ನು ಚಾಲನೆ ಮಾಡುವ ಮೂಲಕ ಗಮನ ಸೆಳೆದರು.
ಇದೇ ಮೊದಲ ಬಾರಿಗೆ ತಾವು ಅಂಬುಲನ್ಸ್ ಚಾಲನೆ ಮಾಡಿದ್ದಾಗಿಯೂ, ಚಾಲಕರು ತುರ್ತು ಸಂದರ್ಭದಲ್ಲಿ ಆಸ್ಪತ್ರೆ ತಲುಪಲು ಎಷ್ಟು ಕಷ್ಟವಾಗುತ್ತದೆ ಎನ್ನುವುದನ್ನು ತಿಳಿದುಕೊಂಡೆ ಎಂದು ಅಂಜಲಿ ನಿಂಬಾಳಕರ್ ಪ್ರಗತಿವಾಹಿನಿಗೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ