Latest

ಕಾರಿನೊಳಗೆ ಉಸಿರುಗಟ್ಟಿ ಮೂವರು ಮಕ್ಕಳ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ತಿರುವನ್ವೇಲಿ: ಮಕ್ಕಳು ಕಾರಿನೊಳಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಡೋರ್ ಲಾಕ್ ಆದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ತಿರುವನ್ವೇಲಿ ಜಿಲ್ಲೆಯ ಪನಗುಂಡಿಯಲ್ಲಿ ನಡೆದಿದೆ.

ಇಲ್ಲಿನ ಲೆಪ್ಪಾಯಿ ಅಪಾರ್ಟ್ ಮೆಂಟ್ ಬಳಿ ಈ ದುರಂತ ಸಂಭವಿಸಿದೆ. ಕಾರೊಳಗೆ ಮೂವರು ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾರ್ ಡೋರ್ ಲಾಕ್ ಆಗಿದ್ದು, ಉಸಿರುಗಟ್ಟಿ ಮೂವರು ಮಕ್ಕಳು ಕಾರಿನಲ್ಲಿಯೇ ಮೃತಪಟ್ಟಿದ್ದಾರೆ.

ಕಬಿಶಾಂತ್ (4), ನಿತೇಶ್ (5) ಹಾಗೂ ನಿತಿಶಾ (7) ಮೃತ ಮಕ್ಕಳು. ಮಕ್ಕಳ ಸಾವಿನಿಂದ ಕಂಗಾಲಾಗಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಯಲ್ಲಾಪುರ-ಶಿರಸಿ ಅರಣ್ಯ ಸೇರಿ ಕರಾವಳಿ ಜಿಲ್ಲೆಯ 4 ಕಡೆಗಳಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಆಕ್ಟೀವ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button