Latest

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ, ಉಪಾಧ್ಯಕ್ಷರಾಗಿ ಭಾಸ್ಕರ್ ರಾವ್ ನೇಮಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷ ರಾಜ್ಯ ಪದಾಧಿಕಾರಿಗಳ ತಂಡ ಪುನರ್ ರಚನೆ ಮಾಡಿದೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ದೇಶನದಂತೆ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರು ರಾಜ್ಯ ಪದಾಧಿಕಾರಿಗಳ ತಂಡ ಪುನರಚಿಸಿದ್ದಾರೆ. ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಹಾಗೂ ಬೆಂಗಳೂರು ನಗರಾಧ್ಯಕ್ಷರಾಗಿ ಮೋಹನ್ ದಾಸರಿ ಪುನರಾಯ್ಕೆಯಾಗಿದ್ದಾರೆ.

Home add -Advt

ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಗೂ ವಿಜಯ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಸಂಚಿತ್ ಸಹಾನಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹರಿಹರನ್ ರಾಜ್ಯ ಖಜಾಂಚಿ, ಜಗದೀಶ್ ವಿ ಸದಂ ಮಾಧ್ಯಮ ಉಸ್ತುವಾರಿ, ಕೆ.ಮಥಾಯ್ ರಾಜ್ಯ ವಕ್ತಾರರಾಗಿ ನೇಮಕಗೊಂಡಿದ್ದಾರೆ.
ದಯವಿಟ್ಟು ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ; ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ; ಕಾಂಗ್ರೆಸ್-ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಹೆಚ್.ಡಿ.ಕೆ

Related Articles

Back to top button