*ಗಿಟಾರ್ ಗೆ ಹೆಲ್ಮೆಟ್ ಹಾಕಿಲ್ಲ ಎಂದು ಬೈಕ್ ಸವಾರನಿಗೆ ದಂಡ ವಿಧಿಸಿದ ಎಐ ಕ್ಯಾಮೆರಾ*

ಪ್ರಗತಿವಾಹಿನಿ ಸುದ್ದಿ: ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಎಐ ತಂತ್ರಜ್ಞಾನ ಅಳವಡಿಕೆ ಸಹಜವಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ತಡೆಯುವಲ್ಲಿಯೂ ಎಐ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕೆಲವೊಮ್ಮೆ ಎಐ ಮಾಡುವ ಎಡವಟ್ಟಿಗೆ ಭಾರಿ ದಂಡ ತೆರಬೇಕಾಗುತ್ತದೆ.
ಇಂತದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟ್ರಾಫಿಕ್ ರೂಲ್ಸ್ ಉಲ್ಲಂಘನೆ ತಡೆಗೆ ಅಳವಡಿಸಲಾಗಿರುವ ಎಐ ಕ್ಯಾಮೆರಾ ಮಾಡಿದ ಯಡವಟ್ಟಿನಿಂದಾಗಿ ಬೈಕ್ ಸವಾರ ಭಾರು ದಂಡ ತೆತ್ತಿದ್ದಾನೆ. ಬೈಕ್ ನಲ್ಲಿ ಕೊಂಡೊಯ್ಯುತ್ತಿದ್ದ ಗಿಟಾರ್ ಗೆ ಹೆಲ್ಮೆಟ್ ಹಾಕಿಲ್ಲ ಎಂದು ಎಐ ಕ್ಯಾಮೆರಾ ದಂಡ ವಿಧಿಸಿದೆ.
ಸೌವಿಕ್ ದತ್ತ ಎಂಬುವವರು ಸ್ಕೂಟರ್‌ನಲ್ಲಿ ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಎಐ ಕ್ಯಾಮೆರಾ, ಹಿಂಬದಿಯಲ್ಲಿದ್ದ ಗಿಟಾರ್ ಅನ್ನು ಮನುಷ್ಯ ಎಂದುಕೊಂಡು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿದೆ.
ಆನ್‌ಲೈನ್‌ನಲ್ಲಿ ಬೈಕ್ ಸವಾರನಿಗೆ ಫೋಟೋ ಸಮೇತ ಚಲನ್ ರವಾನೆಯಾಗಿದೆ. ಫೋಟೋ ನೋಡಿದ ಬೈಕ್ ಸವಾರ ಶಾಕ್ ಆಗಿದ್ದಾನೆ. ಎಐ ಕ್ಯಾಮೆರಾ ಮಾಡಿದ ಈ ತಪ್ಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




