*ನ.26ರಂದು ಬೆಳಗಾವಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 26ರಂದು ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರೇಬಾಗೇವಾಡಿ ಉಪಕೇಂದ್ರ ವ್ಯಾಪ್ತಿ
110 ಕೆ.ವಿ. ಹಿರೇಬಾಗೇವಾಡಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಮುತ್ನಾಳ, ವಿರಕನಕೊಪ್ಪ, ಅರಳಿಕಟ್ಟಿ, ಬಸಾಪುರ, ಹಿರೇಬಾಗೇವಾಡಿ, ಬೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಕೆ.ಕೆ.ಕೊಪ್ಪ, ಕಲಾರಕೊಪ್ಪ, ಸಿದ್ದನಹಳ್ಳಿ, ಬಡಕೊಳ್ಳಮಠ, ಹಲಗಿಮರ್ಡಿ, ನಾಗೇನಟ್ಟಿ, ನಾಗರಹಾಳ, ಬಡಸ, ನಂದಿಹಳ್ಳಿ ಹಾಗೂ ಕುಕಡೊಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ, ಗಾಡಿಕೊಪ್ಪ ಮತ್ತು ಪಾರಿಶ್ವಾಡ ಗ್ರಾಮಗಳಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಖಾನಾಪುರ ಉಪಕೇಂದ್ರ ವ್ಯಾಪ್ತಿ
110 ಕೆ.ವಿ. ಖಾನಾಪುರ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಲೈಲಾ ಶುಗರ ಕಾರ್ಖಾನೆ, ದೇವಲತ್ತಿ, ಬಿದರಭಾವಿ, ಭಂಡಾರಗಾಳಿ, ಗರ್ಲಗುಂಜಿ, ತೋಪಿನಕಟ್ಟಿ, ಬೋರಗಾಂವ, ನಿಡಗಲ, ದೊಡ್ಡಹೊಸೂರ, ಸಣ್ಣಹೊಸೂರ, ಕರಂಬಳ, ಜಳಗಾ, ಕುಪ್ಪಟಗಿರಿ, ಲೋಕೊಳ್ಳಿ, ಲಕ್ಕೇಬೈಲ, ಯಡೋಗಾ, ಬಳೋಗಾ, ಜೈನಕೊಪ್ಪ, ಗಾಂಧಿನಗರ, ಹಲಕರ್ಣಿ, ಕೋರ್ಟ್ ಪ್ರದೇಶ, ಕೈಗಾರಿಕಾ ಪ್ರದೇಶ, ಬಾಚೋಳ್ಳಿ, ಕೌಂದಲ, ಝಾಡನಾವಗಾ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ, ಕಾರಲಗಾ, ಶಿವೊಳ್ಳಿ ಹಾಗೂ ಚಾಪಗಾಂವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಲೋಂಡಾ ಹಾಗೂ ಖಾನಾಪುರ ಉಪಕೇಂದ್ರ ವ್ಯಾಪ್ತಿ
33 ಕೆ.ವಿ. ಲೋಂಡಾ ಮತ್ತು ಖಾನಾಪುರ ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುವ ನಾಗರಗಾಳಿ, ನಾಗರಗಾಳಿ ರೈಲ್ವೆ ನಿಲ್ದಾಣ, ಮುಂಡವಾಡ, ಕುಂಬರ್ಡಾ, ತಾರವಾಡ, ಲೋಂಡಾ, ಲೋಂಡಾ ರೈಲ್ವೆ ನಿಲ್ದಾಣ, ಗುಂಜಿ, ಮೋಹಿಶೇಟ, ವಾಟ್ರಿ, ಭಾಲ್ಕೆ ಬಿ.ಕೆ., ಭಾಲ್ಕೆ ಕೆ.ಎಚ್., ಶಿಂದೋಳ್ಳಿ, ಹೊನ್ನಲ, ಸಾವರಗಾಳಿ, ಅಂಬೇವಾಡಿ, ತಿವೊಳ್ಳಿ, ಡೋಕೆಗಾಳಿ, ಖಾನಾಪುರ ಪಟ್ಟಣ, ಶಿವಾಜಿನಗರ, ರುಮೇವಾಡಿ, ಓತೋಳ್ಳಿ, ಮೊದೇಕೊಪ್ಪ, ನಾಗುರ್ಡಾ, ರಾಮಗುರವಾಡಿ, ಅಂಬೋಳಿ, ಹರಸನವಾಡಿ, ಅಸೋಗಾ, ನೇರಸಾ, ಅಶೋಕ ನಗರ, ಮಂತುರ್ಗಾ, ಶೇಡೇಗಾ ಹಾಗೂ ಹೆಮ್ಮಡಗಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೀಡಿ ಉಪಕೇಂದ್ರ ವ್ಯಾಪ್ತಿ
110 ಕೆ.ವಿ. ಬೀಡಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಹಿಂಡಲಗಿ, ಮಂಗ್ಯಾನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪುರ, ಸುರಪುರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ, ಗಸ್ತೋಳ್ಳದಡ್ಡಿ, ಗಸ್ತಳ್ಳಿ ಹೊಸೆಟ್ಟಿ, ಶಿವಾಜಿನಗರ, ಹಾಲಜುಂಜವಾಡ, ಚನ್ನಕೇಬೈಲ, ಮಾಸ್ಥಾನಟ್ಟಿ, ಹಲಸಾಳ, ಪಾದಲವಾಡಿ, ಅನಗಡಿ, ಕರಂಜಲ, ಪೋತೋಳಿ, ಕಾಪೋಲಿ, ಶಿವಠಾಣ, ಶಿಂದೋಳ್ಳಿ, ಗೋಸೆ, ಮಡವಾಲ, ಗೋಟಗಾಳಿ, ದೇವರಾಯಿ, ಜಂಬೇಗಾಳಿ, ನಂಜನಕೊಡಲ, ಸುಳೇಗಾಳಿ, ಹತ್ತರವಾಡ, ಮೇರ್ಡಾ, ಕಾರಜಗಿ, ಬಸ್ತವಾಡ, ಹಲಗಾ, ಹಂದೂರ, ಹುಲಿಕೊತ್ತಲ, ನವೋದಯ ನಗರ, ಕಸಮಳಗಿ, ಮುಗಳಿಹಾಳ, ಕಡತನಬಾಗೇವಾಡಿ, ಬಳಕೆ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ದೇಮಿನಕೊಪ್ಪ, ವಡ್ಡಬೈಲ, ಚಿಕ್ಕಅಂಗೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಜುಂಜವಾಡ, ಗರ್ಬಾನಟ್ಟಿ, ಸಗರೆ, ದೊಡ್ಡಬೈಲ, ಚನ್ನೇವಾಡಿ, ಭುತೇವಾಡಿ, ಹಲಕಿ, ಗುಂಡಪಿ, ಬಿಜಗರ್ಣಿ, ಬಂಬರಡಾ ಹಾಗೂ ಮೆಂಡಗಾಳಿ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
ಕೊಡಚವಾಡ ಉಪಕೇಂದ್ರ ವ್ಯಾಪ್ತಿ
110 ಕೆ.ವಿ. ಕೊಡಚವಾಡ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಪಾರಿಶ್ವಾಡ, ಹಿರೇಮುನವಳ್ಳಿ, ಜಕನೂರ, ಚಿಕ್ಕಹಟ್ಟಿಹೊಳಿ, ಗಾಡಿಕೊಪ್ಪ, ಹಿರೇಹಟ್ಟಿಹೊಳಿ, ಚಿಕ್ಕದಿನಕೊಪ್ಪ, ಕಗ್ಗಣಗಿ, ಬಳಕಿ, ಅವರೊಳ್ಳಿ, ದೇಮಿನಕೊಪ್ಪ, ವಡೇಬೈಲ, ತೋಪಿನಕಟ್ಟಿ, ಬಿದರಭಾವಿ, ಲೋಕೊಳ್ಳಿ, ದೊಡ್ಡಹೊಸೂರ, ಗನೇಬೈಲ, ದೇವಲತ್ತಿ, ಕಮಶಿನಕೊಪ್ಪ, ಜೈನಕೊಪ್ಪ, ಕೊಡಚವಾಡ, ಕಾರಲಗಾ, ಹೆಬ್ಬಾಳಹಟ್ಟಿ, ಕೌಂದಲ, ಝಾಡನಾವಗಾ, ಕೊಂಕಣ ನಾವಗಾ, ಕರಂಬಳ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ, ಶಿವೊಳ್ಳಿ ಹಾಗೂ ಚಾಪಗಾಂವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಎಲ್ಲಾ ಉಪಕೇಂದ್ರಗಳ ವ್ಯಾಪ್ತಿಯ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳಿಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯ ಮತ್ತು ಪಾಲನೆ ಬೆಳಗಾವಿ ಗ್ರಾಮೀಣ ವಿಭಾಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.



