Kannada NewsLatestNational

*ರೀಲ್ಸ್ ಗಾಗಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ತೆಗೆದು ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದ ಯೂಟ್ಯೂಬರ್ ದಂಪತಿ: ಎಲ್ಲವನ್ನೂ ಕದ್ದು ಎಸ್ಕೇಪ್ ಆದ ಕಳ್ಳರ ಗ್ಯಾಂಗ್*

ಪ್ರಗತಿವಾಹಿನಿ ಸುದ್ದಿ: ರೀಲ್ಸ್ ಹಾಗೂ ಯೂಬ್ ವಿಡಿಯೋಗಾಗಿ ಮನೆಯಲ್ಲಿದ್ದ ರಾಶಿ ರಾಶಿ ನಗದು ಹಣ, ಚಿನ್ನಾಭರಣ ವನ್ನು ತೆಗೆದು ವಿಡಿಯೋ ಮಾಡಿದ್ದ ಖ್ಯಾತ ಯೂಟ್ಯೂಬರ್ ಓರ್ವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿ ಪರಾರುಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ತಮಿಳುನಾಡಿನ ನಾಗರ್‌ಕೋಯಿಲ್‌ ಬಳಿ ಈ ಘಟನೆ ನಡೆದಿದೆ. ನಾಗರ್ಕೋಯಿಲ್ ನ ತುಕೋನಂನ ವಿಐಪಿ ಗಾರ್ಡನ್‌ನಲ್ಲಿ ವಾಸವಾಗಿರುವ ಯೂಟ್ಯೂಬರ್ ವಿನೋತ್ ಕುಮಾರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 944 ಗ್ರಾಂ ಚಿನ್ನ ಮತ್ತು ನಗದನ್ನು ಕಳ್ಳರು ದೋಚಿದ್ದಾರೆ. ಇತ್ತೀಚೆಗೆ, ದಂಪತಿ ತಮ್ಮ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿದ್ದ ಬೆನ್ನಲ್ಲೇ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಯೂಟ್ಯೂಬರ್ ವಿನೋತ್ ಪತ್ನಿ ಮಧುಮಿತಾ ತನ್ನ ಮಗಳ ಮೇಲೆ ಹಣವನ್ನು ಸುರಿಯುವುದು, ಚಿನ್ನಾಭರಣಗಳನ್ನು ಪ್ರದರ್ಶಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಸೆರೆಯಾಗಿತ್ತು.

ಇದೇ ಮನೆಯಲ್ಲಿ ಯೂಟ್ಯೂಬರ್ ವಿನೋತ್ ಕುಮಾರ್‌, ಪತ್ನಿ ಮಧುಮಿತಾ ವಾಸವಾಗಿದ್ದರು. ರಾತ್ರಿಯ ವೇಳೆ ಅಪರಿಚಿತರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ನುಗ್ಗಿದ್ದು, ಹಣ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಸಾಮಾಜಿಕ ಜಾಲತಣಗಳಲ್ಲಿ ಹಣ ಹಾಗೂ ಚಿನ್ನಾಭರಣಗಳ ವಿಡಿಯೋ ಹರಿಬಿಟ್ಟಿದ್ದೇ ಕಳ್ಳತನಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.

ರಾಜಕ್ಕಮಂಗಲಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳು ಮತ್ತು ದಂಪತಿಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದ್ದಾರೆ.

ಕನ್ಯಾಕುಮಾರಿಯ ವಿನೋತ್ ಕುಮಾರ್ ಹಾಗೂ ಪತ್ನಿ ಮಧುಮಿತಾ ಇಬ್ಬರು ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದು, ದಂಪತಿಗೆ ಪುಟ್ಟ ಮಗಳಿದ್ದಾಳೆ. ಮೂವರೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button