ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಿಕ್ಷಕರ ಸಂಘ ಸಲ್ಲಿಸಿದ್ದ ಮನವಿಗೆ ಭಾಗಶಃ ಸ್ಪಂದಿಸಿರುವ ಶಿಕ್ಷಣ ಸಚಿವ ಸುರೇಶ ಕುಮಾರ, ಶಾಲೆಗೆ ಹಾಜರಾಗುವುದಕ್ಕೆ ಶಿಕ್ಷಕರಿಗೆ 3 ದಿನ ವಿನಾಯಿತಿ ನೀಡಿದ್ದಾರೆ.
ಶಿಕ್ಷಕರು ಪೂರ್ವಭಾವಿ ಸಿದ್ಧತೆಗಾಗಿ ಜೂನ್ 5ರಿಂದ ಶಾೆಲೆಗೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಆದೇಶಿಸಿತ್ತು. ಇದೇ 10ರಿಂದ 12ರ ವರೆಗೆ ನಡೆಯಲಿರುವ ಪಾಲಕರ ಸಭೆ ಸೇರಿದಂತೆ ವಿವಿಧ ಪೂರ್ವಸಿದ್ಧತೆ, ಸ್ವಚ್ಛತೆ ಮತ್ತಿತರ ಕೆಲಸಗಳಿಗಾಗಿ ಶಿಕ್ಷಕರು ಕೆಲಸಕ್ಕೆ ಹಾಜರಾಗಬೇಕೆಂದು ತಿಳಿಸಲಾಗಿತ್ತು.
ಆದರೆ, ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಶಿಕ್ಷಕರು ರೇಷನ್ ವಿತರಣೆ, ಆರೋಗ್ಯ ಸಮೀಕ್ಷೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ ಅವರಿಗೆ ಈಗಲೇ ಹಾಜರಾಗಲು ಆದೇಶ ನೀಡದೆ ಶಾಲೆ ಆರಂಭವಾಗುವ ಒಂದು ವಾರ ಮೊದಲು ಹಾಜರಾಗಲು ಅವಕಾಶ ನೀಡಬೇಕು ಎಂದು ಶಿಕ್ಷಕರ ಸಂಘ ಮನವಿ ಸಲ್ಲಿಸಿತ್ತು.
ಒಂದು ವಾರದಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡು ಶಾಲೆಗಳನ್ನು ಆರಂಭಿಸಲಾಗುವುದು. ಅನೇಕ ಕಡೆ ಕಂಟೈನ್ಮೆಂಟ್ ಝೋನ್ ಗಳಲ್ಲಿ ಶಾಲೆಗಳಿವೆ. ಅನೇಕ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿಸಲಾಗಿತ್ತು. ಅಲ್ಲೆಲ್ಲ ಸೆನಿಟೈಸರ್ ಸಿಪಂರಣೆ, ಸ್ವಚ್ಛತೆ ಕೆಲಸಗಳನ್ನು ಇನ್ನೂ ಮಾಡಿಲ್ಲ. ಹಾಗಾಗಿ ಶಿಕ್ಷಕರು ತಕ್ಷಣ ಹಾಜರಾಗುವುದರಿಂದ ವಿನಾಯಿಸಿ ನೀಡಬೇಕು ಎಂದು ಕೋರಲಾಗಿತ್ತು.
ಈ ಮನವಿಗೆ ಭಾಗಶಃ ಸ್ಪಂದಿಸಿರುವ ಶಿಕ್ಷಣ ಸಚಿವ ಸುರೇಶ ಕುಮಾರ, ಜೂ.5ರ ಬದಲು ಜೂನ್ 8ರಿಂದ ಶಿಕ್ಷಕರು ಹಾಜರಾಗಲು ಸೂಚಿಸಿದ್ದಾರೆ. ಆದರೆ ಮುಖ್ಯಾಧ್ಯಾಪಕರು ಜೂನ್ 5ರಿಂದಲೇ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.
ವಿಪರ್ಯಾಸವೆಂದರೆ, ಶಾಲೆ ಆರಂಭದ ದಿನವೇ ಇನ್ನೂ ನಿಶ್ಚಯವಾಗಿಲ್ಲ. ಶಿಕ್ಷಕರು ಈಗಲೇ ಶಾಲೆಗೆ ಹಾಜರಾಗಬೇಕೆಂದು ಆದೇಶಿಸಲಾಗಿದೆ. ಎಷ್ಟೋ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಶಿಕ್ಷಕರು ಈಗಲೇ ಹೊಗುವ ಸ್ಥಿತಿ ಕೂಡ ಇಲ್ಲ. ಅನೇಕ ಕಡೆ ಕೊರೋನಾ ಕಾಣಿಸಿಕೊಂಡಿದ್ದು, ಶಿಕ್ಷಕರಿಗೆ ಕೂಡ ರಿಸ್ಕ್ ಉಂಟಾಗಬಹುದು. ಕೆಲವು ಹಳ್ಳಿಗಳಿಗೆ ಬಸ್ ವ್ಯವಸ್ಥೆ ಕೂಡ ಆರಂಭವಾಗಿಲ್ಲ. ಕಾರಣವಿಲ್ಲದೆ ಶಿಕ್ಷಕರನ್ನು ಹಾಜರುಪಡಿಸಿಕೊಳ್ಳುವ ಬದಲು ಶಾಲೆ ಆರಂಭಕ್ಕೆ ಒಂದು ವ್ಯವಸ್ಥಿತ ಯೋಜನೆ ಆದ ನಂತರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಸೂಕ್ತ.
ಕೊನೆಯ ಪಕ್ಷ, ಜೂ.12ರಂದು ಪಾಲಕರ ಸಭೆ ನಡೆಸಿದ ನಂತರ ಶಾಲೆ ಆರಂಭದ ದಿನಾಂಕ ನಿಶ್ಚಯವಾಗುವವರೆಗಾದರೂ ಶಿಕ್ಷಕರಿಗೆ ಹಾಜರಾತಿಯಿಂದ ವಿನಾಯಿತಿ ಕೊಡುವುದು ವಿಹಿತ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಮತ್ತು ನಿಮ್ಮ ಪರಿಚಿತರಿಗೆಲ್ಲ ಕಳಿಸಿ)
ಶಾಲೆಗಳ ಆರಂಭ ಸುತ್ತೋಲೆ ಅಧಿಕೃತವಲ್ಲ -ಸುರೇಶ ಕುಮಾರ್
ಸಧ್ಯಕ್ಕೆ ಶಾಲೆಗಳನ್ನು ಪುನರಾರಂಭ ಮಾಡಬೇಡಿ: ಸಿದ್ದರಾಮಯ್ಯ ಮನವಿ
ಶಿಕ್ಷಣ ಸಚಿವ ಎಸ್ ಸುರೇಶಕುಮಾರ್ ಅವರಿಗೆ ಒಂದು ಬಹಿರಂಗ ಪತ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ