*ಎಸಿಪಿಆರ್ ಶತಮಾನೋತ್ಸವದ ಅಂಗವಾಗಿ 3 ದಿನಗಳ ಉಪನ್ಯಾಸ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಅಕಾಡೆಮಿ ಆಫ್ ಕಂಪೆರಿಟಿವ್ ಫಿಲಾಸಫಿ ಆಂಡ್ ರಿಲಿಜನ್ (ಎ.ಸಿ.ಪಿ.ಆರ್) ಸಂಸ್ಥೆಯು ಶತಮಾನೋತ್ಸವದ ಅಂಗವಾಗಿ ಶ್ರೀಕೃಷ್ಣ ನೀತಿ ಎಂಬ ವಿಷಯದ ಮೇಲೆ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.
ಏ. ೨೪, ೨೫, ೨೬ರಂದು ಬೆಳಗಾವಿಯ ನೆಹರೂ ನಗರದ ಡಾ. ಬಿ. ಎಸ್ ಜೀರಗಿ ಕೆ.ಎಲ್.ಇ ಸೆಂಟಿನರಿ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಲಿದೆ. ಅಯೋಧ್ಯೆ ಶ್ರೀ ರಾಮ ಮಂದಿರ ನ್ಯಾಸ ಖಜಾಂಚಿ, ಅಂತರ ರಾಷ್ಟ್ರೀಯ ಖ್ಯಾತಿಯ ಶ್ರೀ ಗೊವಿಂದದೇವ ಗಿರಿ ಮಹಾರಾಜ್ ಇವರು ಉಪನ್ಯಾಸ ನೀಡಲಿದ್ದಾರೆ.
ಎಪ್ರೀಲ್ ೨೪ ರಂದು ಸಂಜೆ ೫.೩೦ ಘಂಟೆಗೆ ಬೆಳಗಾವಿ ನೆಹರೂ ನಗರದ ಕೆ.ಎಲ್.ಇ ಸೆಂಟಿನರಿ ಜೀರಿಗೆ ಸಭಾಭವನದಲ್ಲಿ ಕೆ.ಎಲ್.ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಗೊವಿಂದದೇವ ಗಿರಿ ಮಹಾರಾಜ್ ಇವರು ಈ ಮೂರುದಿನ ಸಂಜೆ ೫.೩೦ ರಿಂದ ೭.೩೦ ರ ವರೆಗೆ ಶ್ರೀಕೃಷ್ಣ ನೀತಿ ಎಂಬ ವಿಷಯದಮೇಲೆ ಉಪನ್ಯಾಸ ನೀಡಲಿದ್ದಾರೆ.
ಅವರು ಜಗತ್ತಿನ ಅತಿದೊಡ್ಡ ಅಂತರಜಾಲ ಗೀತಾ ಅಧ್ಯಯನ ವೇದಿಕೆಯಾದ ಗೀತಾ ಪರಿವಾರ ವನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಶ್ರೀ ಗುರುದೇವ ರಾನಡೆಯವರ ಬಗೆಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಸನಾತನ ಧರ್ಮ ಮತ್ತು ಭಾರತೀಯ ತತ್ವ ಪರಂಪರೆಯ ಮೇಲೆ ಅಧಿಕಾರವಾಣಿಯಿಂದ ಮಾತನಾಡಬಲ್ಲವರು.
ತಾ. ೨೬.೦೪.೨೦೨೫ ರಂದು ಸಂಜೆ ಕೇಂದ್ರ ಸಚಿವ ಪ್ರಹಲ್ಹಾದ ಜೋಶಿಯವರು ಸಮಾರೋಪ ಭಾಷಣ ನೀಡಲಿದ್ದಾರೆ.
ತಾ. ೨೫.೦೪.೨೦೨೫ ರಂದು ಬೆಳಿಗ್ಗೆ ೧೧ ಘಂಟೆಗೆ ಶ್ರೀ ಗೋವಿಂದದೇವ ಗಿರೀಜಿ ಮಾಹಾರಜ ಎ.ಸಿ.ಪಿ.ಆರ್ ಗುರುದೇವ ರಾನಡೆ ಮಂದಿರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದೇಶಕಾ ಆಧಾರ್ ಯುವ ಸಂಸ್ಕಾರ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಎ.ಸಿ.ಪಿ.ಆರ್ ಶ್ರೀ ಗುರುದೇವ ರಾನಡೇ ಮಂದಿರವು ೨೦೨೪-೨೦೨೫ ರಲ್ಲಿ ಶತಮಾನೋತ್ಸವವನ್ನು ಆಚರಿಸುತ್ತಲಿದೆ.
ಆರ್ ಎಸ್ ಎಸ್ ಸರಸಂಘಚಾಲಕ ಮೋಹನಜೀ ಭಾಗ್ವತ್ ಅವರು 2024ರ ಆಗಷ್ಟ್ 1ರಂದು ಉದ್ಘಾಟಿಸಿದ್ದರು. ಶ್ರೀ ರಾಮಚಂದ್ರ ಮಿಶನ್ ಅಧ್ಯಕ್ಷ ಪದ್ಮಭೂಷಣ ಕಮಲೇಶ ಪಟೇಲ್ ಉಪಸ್ಥಿತರಿದ್ದರು. 2025ರ ಆಗಷ್ಟ್ 1ರಂದು ರಂದು ಶತಮಾನೋತ್ಸವ ಸಮಾರೋಪಗೊಳ್ಳಲಿದೆ.
ಈ ಒಂದು ವರ್ಷದ ಅವಧಿಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ದೇಶದ ಉದ್ದಗಲಕ್ಕೂ ಕಾರ್ಯಕ್ರಮ ಆಯೋಜಿತವಾಗಿವೆ. ಈಗಾಗಲೇ ಒಂದು ರಾಷ್ಟ್ರೀಯ ಗೋಷ್ಠಿ ಎರಡು ದಿನಗಳಕಾಲ ಜರುಗಿದೆ. ಮೂವತ್ತಕ್ಕೂ ಹೆಚ್ಚು ಶ್ರೀ ಗುರುದೇವರ ಗ್ರಂಥಗಳ ಮಾಲಿಕೆ ಹೊರಬರುತ್ತಿದೆ. ಶ್ರೀ ಗುರುದೇವರು ಕಾರ್ಯನಿರ್ವಹಿಸಿದ ಎಲ್ಲಾಕಡೆ ಕಾರ್ಯಕ್ರಮ ಆಯೋಗಿಸಲಾಗಿದೆ.