Belagavi NewsBelgaum NewsKannada NewsKarnataka NewsLatest

*ಕೆಎಲ್ಎಸ್ ಜಿಐಟಿಯಲ್ಲಿ 3 ದಿನಗಳತಾಂತ್ರಿಕ ಉತ್ಸವ ಅವಲಾಂಚ-23 ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೂರು ದಿನಗಳ ತಾಂತ್ರಿಕ ಉತ್ಸವ ಅವಲಾಂಚ-23, ಉತ್ಸವದ ಉದ್ಘಾಟನೆಯನ್ನು 17ನೇ ಅಕ್ಟೋಬರ್ 2023 ರಂದು ನಡೆಸಲಾಯಿತು.


ಮುಖ್ಯ ಅತಿಥಿ, ನ್ಯಾನೊಸೆಲ್ ನೆಟ್‌ವರ್ಕ್, ಸಿಇಒ, ಬೆಂಗಳೂರು, ದೇವದಾಸ್ ಪೈ ಮಾತನಾಡಿ, ವಿಶ್ವದ ಉನ್ನತ ಸಂಸ್ಥೆಗಳು ಒಂದು ಕಾಲದಲ್ಲಿ ಒಂದು ಸಣ್ಣ ಸ್ಟಾರ್ಟ್ ಅಪ್ ಕಲ್ಪನೆಯಾಗಿತ್ತು, ಈಗ ಅವು ಅಂತಾರಾಷ್ಟ್ರೀಯ ಉದ್ದಿಮೆಗಳಾಗಿ ರೂಪಗೊಂಡಿವೆ.

ಈಗಿನ ಒಂದು ಸಣ್ಣ ಆಲೋಚನೆ ಮುಂದಿನ ದಿನಗಳಲ್ಲಿ ದೊಡ್ಡ ಉದ್ದಿಮೆಯಾಗಿ ಬಹಳಷ್ಟು ಯುವಕರಿಗೆ ಉದ್ಯೋಗ ನೀಡುವ ಸ್ಟಾರ್ಟ್ ಅಪ್ ಆಲೋಚನೆಗಳನ್ನು ಉತ್ತೇಜಿಸಲು ಕರೆ ನೀಡಿದರು. ಭಾರತವು ಉದ್ಯೋಗ ಅವಕಾಶಗಳ ಸ್ಥಳವಾಗಿದೆ, ಏಕೆಂದರೆ ನಾವು ಜಾಗತಿಕವಾಗಿ ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ. ತರಗತಿಯಲ್ಲಿ ಕಲಿಯುವ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡುತ್ತ ಅವರು, ತಪ್ಪುಗಳನ್ನು ಮಾಡಿ, ಸುಧಾರಿಸಿಕೊಂಡು, ಉತ್ತಮ ಪಡಿಸಿಕೊಂಡು ಬೆಳೆಯಬೇಕು. ಇಂದು ಜಗತ್ತು ಹೆಚ್ಚು ಪರಸ್ಪರ ಸಂಬಂಧ ಹೊಂದಿದ್ದು, ಅಂತರ್ ಶಿಸ್ತಿನಿಂದ ಕೂಡಿರುವುದರಿಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಶಿಕ್ಷಣ ವಿಕಸನಗೊಳ್ಳಬೇಕಿದೆ ಎಂದು ಹೇಳಿದರು.

ಕೆಎಲ್‌ಎಸ್ ಜಿಐಟಿ, ಆಡಳಿತ ಮಂಡಳಿ ಅಧ್ಯಕ್ಷ, ಶ್ರೀ.ರಾಜೇಂದ್ರ ಬೆಳಗಾಂವಕರ ಅವರು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ನೀಡುವ ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅವರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತದೆ, ಜೊತೆಗೆ ಅವರ ತಿಳಿವಳಿಕೆಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು.

ಪ್ರಾಚಾರ್ಯ ಡಾ.ಎಂ.ಎಸ್.ಪಾಟೀಲ ಸ್ವಾಗತಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅರಳಿಸಲು ಹಾಗೂ ಭವಿಷ್ಯದಲ್ಲಿ ಸವಾಲುಗಳಿಗೆ ಅವರನ್ನು ಸಿದ್ಧಗೊಳಿಸಲು ಅವಲಾಂಚ ವೇದಿಕೆಯಾಗಿದೆ. ಹ್ಯಾಕಥೋನ್, ಟೆಕ್ನಿಕಲ್ ಪೇಪರ್ ಪ್ರೆಸೆಂಟೇಶನ್‌ಗಳು, ಮಾಡೆಲ್ ಮೇಕಿಂಗ್, ಡಿಬೇಟ್‌ ನಂತಹ 25 ಕ್ಕೂ ಹೆಚ್ಚಿನ ಸ್ಪರ್ಧೆಗಳು ಜರುಗಲಿದ್ದು , 900 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈಗಾಗಲೇ ನೋಂದಾಯಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ, ಡಾ.ಸುಪ್ರಿಯಾ ಶಾನಭಾಗ ಅತಿಥಿಗಳನ್ನು ಪರಿಚಯಿಸಿದರು, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರು, ಡಾ.ಡಿ.ಬಿ.ಕುಲಕರ್ಣಿ ಅತಿಥಿಗಳಿಗೆ ಪುಷ್ಪನಮನ ಸಲ್ಲಿಸಿದರು ಮತ್ತು ವಿದ್ಯಾರ್ಥಿ ಸಂಚಾಲಕರಾದ ಶ್ರೀ. ರೋಹನ್ ವಂದಿಸಿದರು.

ಈ ಸಂದರ್ಭದಲ್ಲಿ ಡೀನ್‌ಗಳು, ಎಚ್‌ಒಡಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button