ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಸವನಕೊಳ್ಳದಿಂದ ಲಕ್ಷ್ಮಿಟೆಕ್‌ಗೆ ಸರಬರಾಜಾಗುವ ಕಚ್ಚಾ ನೀರಿನ ೭೧೧ಎಂ.ಎಂ ಎಮ್.ಎಸ್ ಪೈಪಲೈನ್‌ನಲ್ಲಿ ಜೆಎನ್‌ಎಂಸಿ, ಕೆಎಲ್‌ಇ, ಡಿಮಾರ್ಟ್, ನೆಹರು ನಗರದಲ್ಲಿ ಸೋರಿಕೆಯಾಗಿರುವುದರಿಂದ, ಹಾಗೂ ಲಕ್ಷ್ಮಿಟೆಕ್ ದಿಂದ ಗಾರ್ಡನ್ ಲೈನ್ 450 ಎಂಎಂ ಪೈಪ್ ಲೈನ್ ರಾಣಿ ಚೆನ್ನಮ್ಮ ಸರ್ಕಲ್‌ದಲ್ಲಿ ಸೋರಿಕೆಯಾಗಿರವುದರಿಂದ ಮತ್ತು ಕಣಗಾಂವದಲ್ಲಿ ಏರ್‌ವಾಲ್ವ ರಿಪೇರಿಯಿರುವುದರಿಂದ ಜನೆವರಿ 10ರಂದು ದುರಸ್ಥಿ ಕೈಗೊಳ್ಳುವುದರಿಂದ ದಿನಾಂಕ 10 ರಿಂದ 12ನೇ ಜನೇವರಿ 2024 ರವರೆಗೆ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಗಾವಿ ನಗರಕ್ಕೆ ಸರಬರಾಜಾಗುವ ಕಚ್ಚಾ ನೀರಿನ ಕೊಳವೆಯಲ್ಲಿ ಸೋರಿಕೆವುಂಟಾಗಿರುವುದರಿಂದ ಮತ್ತು ಏರ್‌ವಾಲ್ವ ರಿಪೇರಿಯಿರುವುದರಿಂದ ತುರ್ತಾಗಿ ಜ.10ರಂದು ದುರಸ್ಥಿ ಕಾರ್ಯ ಕೈಗೊಳ್ಳುವ ಹಿನ್ನಲೆಯಲ್ಲಿ ಬೆಳಗಾವಿ ನಗರದ 24X7 ಪ್ರಾತ್ಯಕ್ಷಿಕ ವಲಯ ಸೇರಿ ನಗರದ ಕೆಳಕಂಡ ಪ್ರದೇಶಗಳಲ್ಲಿ ಜ.10 ಮತ್ತು 12ರಂದು ನೀರು ಸರಬರಾಜು ಮಾಡುವಲ್ಲಿ (ಸರದಿಯಲ್ಲಿ) ಷೆಡ್ಯೂಲ್‌ನಲ್ಲಿ ವ್ಯತ್ಯಯ ಉಂಟಾಗುವುದು.
ಸರಬರಾಜು ವ್ಯತ್ಯಯ ಉಂಟಾಗುವ ದಕ್ಷಿಣ ಪ್ರದೇಶಗಳು: ಆರ್.ಸಿ.ನಗರ ಮೊದಲನೇ & ಎರಡನೇ ಹಂತದ ಪ್ರದೇಶಗಳಾದ ಟಿಲಕವಾಡಿ, ನಾನಾವಾಡಿ, ವಡಗಾವಿ, ಶಹಾಪೂರ, ದಕ್ಷಿಣ ಪ್ರಾತ್ಯಕ್ಷಿಕ ವಲಯ, ಹಿಂದವಾಡಿ, ಮಜಗಾವಿ, ಬ್ರಹ್ಮನಗರ, ಗೋಕುಲ ನಗರ, ಹುಲಬಟ್ಟಿ ಕಾಲೋನಿ, ಎಸ್‌ಪಿಎಂ ರಸ್ತೆ, ಸಂತಸೇನಾ ರಸ್ತೆ, ಜೈನ ಬಸ್ತಿ, ಖಾಜಿಲೈನ್, ಚಿದಂಬರ ನಗರ, ಅನಗೋಳ, ಗದೆಮಾರ್ಗ, ಓಂನಗರ, ಮೃತ್ಯುಂಜಯ ನಗರ, ಹಳೆ ಪಿಬಿ ರಸ್ತೆ.
ಸರಬರಾಜು ವ್ಯತ್ಯಯ ಉಂಟಾಗುವ ಉತ್ತರ ಪ್ರದೇಶಗಳು: ಕಣಬರ್ಗಿ, ಕೆಎಚ್‌ಬಿ ಕಣಬರ್ಗಿ, ಆಟೋನಗರ, ಆಂಜನೇಯ ನಗರ,ಉತ್ತರ ಪ್ರಾತ್ಯಕ್ಷಿಕ ವಲಯ, ಅಶೋಕ ನಗರದ ಕೆಲವು ಪ್ರದೇಶ, ವೀರಭದ್ರನಗರದ ಕೆಲವು ಪ್ರದೇಶ, ಸುಭಾಶನಗರದ ಕೆಲವು ಪ್ರದೇ, ಶ್ರೀನಗರದ ಸೆಕ್ಟರ್ ನಂ. ೫.೬.೭.೮.&೯ ಸದಾಶಿವ ನಗರ, ನಗರ ಪ್ರದೇಶ, ಕಂಗ್ರಾಳಿ, ಗಾಂಧಿನಗರ, ಅಲರವಾಡ, ಬಸವನಕುಡಚಿ, ಮತ್ತು ದೇವರಾಜ ಅರಸ ಕಲೋನಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ