ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಕೋವಿಡ್-೧೯ ಪಿಡುಗನ್ನು ನಿರ್ಮೂಲನೆಗೊಳಿಸಲು ಜನ ಸಾಮಾನ್ಯರಿಗೆ ಹಾಗೂ ಕಾರ್ಯಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ವಿತರಿಸಿರುವುದಲ್ಲದೇ ಸಾಮಾಜಿಕ ಸೇವೇಯಲ್ಲಿ ತೊಡಗಿರುವ ’ಜನಕಲ್ಯಾಣ ಟ್ರಸ್ಟ್’ ದೊಂದಿಗೆ ಕೈಜೋಡಿಸಿದೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರ ಗೌಡ ಈ ಮಾಹಿತಿ ನೀಡಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ. ಎಸ್. ನಾವಿ ಇವರು ತನ್ನ ಎನ್.ಎಸ್.ಎಸ್. ತಂಡದ ಸಹಯೋಗದೊಂದಿಗೆ ಈ ಪಿಡುಗು ನಿರ್ಮೂಲನೆ ಮಾಡಲು ಅನೇಕ ಕೋವಿಡ್-೧೯ರ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಇಲ್ಲಿ ಉಲ್ಲೇಖನಿಯ. ಅಲ್ಲದೇ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಅನೇಕ ಆಶಾ ಕಾರ್ಯಕರ್ತೆಯರು, ಪೋಲಿಸರು ಹಾಗೂ ವೈಧ್ಯರೊಂದಿಗೆ ಲಸಿಕೆ ಅಭಿಯಾನ ಕಾರ್ಯಕ್ರಮಗಳಲ್ಲಿ ಶ್ರಮಿಸುತ್ತಿದ್ದಾರೆ.
ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಜನಕಲ್ಯಾಣ ಟ್ರಸ್ಟ್ ಸಹಯೋಗದೊಂದಿಗೆ ಕೋವಿಡ್-೧೯ ಪಿಡುಗನ್ನು ನಿರ್ಮೂಲನೆಗೊಳಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕುಲಪತಿಗ ಪ್ರೊ. ಎಂ. ರಾಮಚಂದ್ರ ಗೌಡ, ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಹಾಗೂ ಗೌರವಾನ್ವಿತ ಸಿಂಡಿಕೇಟ್ ಸದಸ್ಯರುಗಳ ಅಭಿಲಾಷೆಯಂತೆ ಜನಕಲ್ಯಾಣ ಟ್ರಸ್ಟ್ ಗೆ ರೂ.೩,೦೦,೦೦೦/- ಗಳನ್ನು ವಿಶ್ವವಿದ್ಯಾಲಯದ ವತಿಯಿಂದ ನೀಡಲಾಗಿದೆ. ಅಲ್ಲದೇ ಜನಕಲ್ಯಾಣ ಟ್ರಸ್ಟ್ ನ ಕಾರ್ಯಚಟುವಟಿಕೆಗಳಲ್ಲಿ ಕೈಜೊಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಜನಕಲ್ಯಾಣ ಟ್ರಸ್ಟ್ ಹೆಸರಿನಲ್ಲಿ ಕೋವಿಡ್ ಸೆಂಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ