
ಪ್ರಗತಿವಾಹಿನಿ ಸುದ್ದಿ: ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಟ್ರ್ಯಾಕ್ಟರ್ ಸಾಲ ಪಾವತಿ ವಿಚಾರವಾಗಿ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಮಗ ಮಂಜುನಾಥ ತೇಲಿ ಹಾವೇರಿ ಜಿಲ್ಲೆಯ ಯಲವಿಗೆ ರೈಲು ನಿಲ್ದಾಣ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಡಿಕೊಂಡಿದ್ದಾನೆ. ಈ ವೇಲೆ ಮಗನನ್ನು ರಕ್ಷಿಸಲು ಹೋಗಿ ತಾಯಿ ರೇಣವ್ವ ಕೂಡ ಮೃತಪಟ್ಟಿದ್ದಾರೆ.
ತಾಯಿ ಮಗನ ಸಾವಿನ ಸುದ್ದಿ ತಿಳಿದ ಮನೆಯಲ್ಲಿದ್ದ ಸಾವಕ್ಕ ಎನ್ನುವವರು ಕೂಡ ನೇನಿಗೆ ಕೊರಳೊಡ್ಡಿದ್ದಾರೆ. ಗೋನಾಳ ಗ್ರಾಮದ ಮನೆಯಲ್ಲಿ ಸಾವಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.