Kannada NewsKarnataka News

*3 ವರ್ಷದ ಮಗುವನ್ನೇ ಕತ್ತು ಸೀಳಿ ಕೊಲೆಗೈದ ಚಿಕ್ಕಪ್ಪ*

ಪ್ರಗತಿವಾಹಿನಿ ಸುದ್ದಿ: ತನ್ನ ಸಹೋದರನ ಮೂರು ವರ್ಷದ ಮಗುವನ್ನೇ ಕತ್ತು ಸೀಳಿ ಹತ್ಯೆಗೈದ ಘೋರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾರುತಿ ವಾಲಿಕಾರ ಎಂಬುವವರ 3 ವರ್ಷದ ಮಗು ಅಂಗನವಾಡಿಗೆ ಹೋಗಿತ್ತು. ಈ ವೇಳೆ ಮಾರುತಿ ಸಹೋದರ ಭೀಮಪ್ಪ ವಾಲಿಕಾರ ಅಂಗನವಾಡಿಗೆ ತೆರಳಿ ಮಗುವನ್ನು ಕರೆದೊಯ್ದು ಅಂಗನವಾಡಿ ಹಿಮ್ಭಾಗದಲ್ಲಿ ಮಗುವಿನ ಕತ್ತು ಸೀಳಿ ಕೊಲೆಗೈದಿದ್ದಾನೆ.

ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button