Kannada NewsKarnataka NewsLatest

*3 ವರ್ಷದ ಬಾಲಕಿ ಮೇಲೆ ಕಾಮುಕನಿಂದ ಅಟ್ಟಹಾಸ; ಆರೋಪಿ ಯುವಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 22 ವರ್ಷದ ಯುವಕನೊಬ್ಬ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಸಂತ್ರಸ್ತ ಬಾಲಕಿ ಪೋಷಕರ ದೂರಿನ ಮೇರೆಗೆ ಬೆಂಗಳೂರು ಜಯನಗರ ಠಾಣೆ ಪೊಲೀಸರು ಆರೋಪಿ ಶರವಣ (22) ಎಂಬಾತನನ್ನು ಬಂಧಿಸಿ ಪೋಕ್ಸೋ ಕೇಸ್ ದಾಖಲಿಸಿದ್ದಾರೆ.

ಬಾಲಕಿಯ ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಕಾಮುಕ ಬಾಲಕಿ ಮೇಲೆ ಈ ಕೃತ್ಯವೆಸಗಿದ್ದಾನೆ. ಬಾಲಕಿ ಸಮೀಪದ ಅಂಗಡಿಗೆ ಹೋಗಿದ್ದಳು. ಈ ವೇಳೆ ಬಾಲಕಿಯ ಬಾಯಿಗೆ ಬಟ್ಟೆ ಕಟ್ಟಿ ಕರೆದೊಯ್ದಿದ್ದಾನೆ. ಕಿರಿದಾದ ರಸ್ತೆಗೆ ಕರೆದೊಯ್ದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದನ್ನು ಕಂಡ ಅಂಗಡಿಯವರೊಬ್ಬರು ಬಲಕಿ ತಂದೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ವಿಚಾರಿಸಲು ಹೋದಾಗ ಆರೋಪಿಯ ತಾಯಿ ಹಾಗೂ ಸಹೋದರಿ ಸಂತ್ರಸ್ತೆಯ ಕುಟುಂಬದವರು, ಸಂಬಂಧಿಕರ ಮೇಲೆಯೇ ದಾಳಿ ನಡೆಸಿ ಗಲಾಟೆ ಮಾಡಿ ಕಳುಹಿಸಿದ್ದಾರೆ. ಮೂರು ವರ್ಷದ ಬಾಲಕಿ ಮೇಲೆ ದೌರ್ಜನ್ಯವೆಸಗಿರುವ ಕಾಮುಕನನ್ನು ಗಲ್ಲಿಗೇರಿಸಬೇಕು ಎಂದು ಸಂತ್ರಸ್ತೆಯ ಕುಟುಂಬದವರು ಆಗ್ರಹಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button