*30 ರೈಲುಗಳ ಸಂಖ್ಯೆ ಬದಲು*: *ಇಲ್ಲಿದೆ ಹೊಸ ಸಂಖ್ಯೆಗಳ ಸಂಪೂರ್ಣ ಪಟ್ಟಿ*

ಪ್ರಗತಿವಾಹಿನಿ ಸುದ್ದಿ: ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಹಾಗೂ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ನಡುವೆ ಅಧಿಕಾರ ವ್ಯಾಪ್ತಿಯಲ್ಲಿ ಬದಲಾವಣೆ ಆಗುತ್ತಿರುವುದರಿಂದ, ಮಂಗಳೂರು ಸೆಂಟ್ರಲ್ ಸೇರಿದಂತೆ ಈ ಭಾಗದ ಹಲವು ರೈಲುಗಳ ಸಂಖ್ಯೆಯನ್ನು ಬದಲಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
ಒಟ್ಟು 18 ಎಕ್ಸ್ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಹಾಗೂ 12 ದೈನಂದಿನ ಪ್ಯಾಸೆಂಜರ್ ರೈಲುಗಳ ಸಂಖ್ಯೆ ಬದಲಾಗಲಿದೆ. ಹೊಸ ಸಂಖ್ಯೆಗಳು 2027 ರ ಜನವರಿ 1 ರಿಂದ ಜಾರಿಯಾಗಲಿವೆ.
ರಾಮೇಶ್ವರಂ ಮಾರ್ಗದ ಎರಡು ವೀಕ್ಲಿ ರೈಲು ಸಂಚಾರಕ್ಕೆ ಮಾತ್ರ ಬೇರೆ ದಿನಾಂಕ ನಿಗದಿಯಾಗಿದೆ. ಮಂಗಳೂರು ರೈಲು ನಿಲ್ದಾಣವನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರಿಸಿ ಭಾರತೀಯ ರೈಲ್ವೆ ಮಹತ್ವದ ನಿರ್ಧಾರ ಪ್ರಕಟಿಸಿದೆ.
ರೈಲುಗಳ ನಿಲ್ದಾಣಗಳು ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಟಿಕೆಟ್ ಬುಕಿಂಗ್ ಅಥವಾ ರೈಲಿನ ಸ್ಥಿತಿ ಪರಿಶೀಲಿಸುವಾಗ ಜನವರಿಯಿಂದ ಹೊಸ ಸಂಖ್ಯೆಯನ್ನು ಬಳಸಬೇಕು ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
16629 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ಮಲಬಾರ್ ಡೈಲಿ ಎಕ್ಸ್ಪ್ರೆಸ್ 16230
16630 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಮಲಬಾರ್ ಡೈಲಿ ಎಕ್ಸ್ಪ್ರೆಸ್ 16229
16603 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಮಾವೇಲಿ ಡೈಲಿ ಎಕ್ಸ್ಪ್ರೆಸ್ 16233
16604 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ಮಾವೇಲಿ ಡೈಲಿ ಎಕ್ಸ್ಪ್ರೆಸ್ 16234
16649 ಮಂಗಳೂರು ಸೆಂಟ್ರಲ್–ಕನ್ಯಾಕುಮಾರಿ ಪರಶುರಾಮ್ ಡೈಲಿ ಎಕ್ಸ್ಪ್ರೆಸ್ 16249
16650 ಕನ್ಯಾಕುಮಾರಿ–ಮಂಗಳೂರು ಸೆಂಟ್ರಲ್ ಪರಶುರಾಮ್ ಡೈಲಿ ಎಕ್ಸ್ಪ್ರೆಸ್ 16250
16605 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಡೈಲಿ ಎಕ್ಸ್ಪ್ರೆಸ್ 16237
16606 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ಎರ್ನಾಡ್ ಡೈಲಿ ಎಕ್ಸ್ಪ್ರೆಸ್ 16238
16622 ಮಂಗಳೂರು ಸೆಂಟ್ರಲ್–ರಾಮೇಶ್ವರಂ ವೀಕ್ಲಿ ಎಕ್ಸ್ಪ್ರೆಸ್ 16241
16621 ರಾಮೇಶ್ವರಂ–ಮಂಗಳೂರು ಸೆಂಟ್ರಲ್ ವೀಕ್ಲಿ ಎಕ್ಸ್ಪ್ರೆಸ್ 16242
16324 ಮಂಗಳೂರು–ಕೊಯಮತ್ತೂರು ಡೈಲಿ ಎಕ್ಸ್ಪ್ರೆಸ್ 16243
16323 ಕೊಯಮತ್ತೂರು–ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್ಪ್ರೆಸ್ 16244
16610 ಮಂಗಳೂರು ಸೆಂಟ್ರಲ್–ಪಾಲಕ್ಕಾಡ್ ಡೈಲಿ ಎಕ್ಸ್ಪ್ರೆಸ್ 16245
16611 ಪಾಲಕ್ಕಾಡ್–ಕಣ್ಣೂರು ಡೈಲಿ ಎಕ್ಸ್ಪ್ರೆಸ್ 16246
20631 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ 26659
20632 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ವಂದೇ ಭಾರತ್ 26660
20646 ಮಂಗಳೂರು ಸೆಂಟ್ರಲ್–ಮಡಗಾಂವ್ ವಂದೇ ಭಾರತ್ 26657
20645 ಮಡಗಾಂವ್–ಮಂಗಳೂರು ಸೆಂಟ್ರಲ್ ವಂದೇ ಭಾರತ್ 26658
56632 ಕಣ್ಣೂರು–ಕೋಯಿಕ್ಕೋಡ್ 56211
56617 ಕೋಯಿಕ್ಕೋಡ್–ಕಣ್ಣೂರು 56212
56619 ಕಣ್ಣೂರು–ಚೆರುವತ್ತೂರು 56213
56621 ಚೆರುವತ್ತೂರು–ಮಂಗಳೂರು ಸೆಂಟ್ರಲ್ 56214
56625 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ 56225
56626 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ 56226
56627 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ 56227
56628 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ 56228
56629 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ 56233
56630 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ 56234
56615 ಮಡಗಾಂವ್–ಮಂಗಳೂರು ಸೆಂಟ್ರಲ್ 56216
56616 ಮಂಗಳೂರು ಸೆಂಟ್ರಲ್–ಮಡಗಾಂವ್ 56215




