Kannada NewsLatest

ಸಿಎಂ ಯಡಿಯೂರಪ್ಪ ಪರ ಕಿತ್ತೂರಲ್ಲಿ ಮಠಾಧೀಶರ ಸಭೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಿಎಂ ಬಿ.ಎಸ್.ಯಡಿಯೂರಪ್ಪ ಪರ ಬೆಂಬಲಕ್ಕೆ ನಿಂತಿರುವ ವಿವಿಧ ಮಠಾಧೀಶರು ಯಡಿಯೂರಪ್ಪನವರಿಗೆ ಪೂರ್ಣಾವಧಿ ಪೂರೈಸಲು ಅವಕಾಶ ನೀಡಬೇಕು ಎಂದು ಬಿಜೆಪಿ ವರಿಷ್ಠರಿಗೆ ಸ್ಪಷ್ಟ ಸಂದೇಶ ನೀಡುವ ಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ಮಠಾಧೀಶರು ಕಿತ್ತೂರಿನಲ್ಲಿ ಸಭೆ ಸೇರಿದ್ದಾರೆ.

ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಂಗೀದ್ರ ಸ್ಬಾಮೀಜಿ ನೇತೃತ್ವದಲ್ಲಿ ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಪಂಚಾಕ್ಷರಿ‌ ಸ್ವಾಮೀಜಿ, ಬೈಲಹೊಂಗಲ ಹೊಸೂರ ಶ್ರೀ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ವಿರೇಶ್ವರ ಸ್ವಾಮೀಜಿ, ವಿರೇಶ್ವರ ದೇವರು, ಮೃತ್ಯುಂಜಯ ಸ್ವಾಮೀಜಿ, ಗುರುಸಿದ್ದಯ್ಯ ಸ್ವಾಮೀಜಿ ಸೇರಿದಂತೆ 10ಕ್ಕೂ ಹೆಚ್ಚು ಮಠಾಧೀಶರು ಸಭೆ ನಡೆಸಿದರು.

ಸಿಎಂ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿ, ಪೂರ್ಣಾವಧಿ ಮುಗಿಸಲಿ ಎಂದು ಬಿಜೆಪಿ ವರಿಷ್ಠರು ಸ್ಪಷ್ಟವಾಗಿ ತಿಳಿಇದರೆ ರಾಜ್ಯದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಗದ್ದಲ-ಗೊಂದಲಗಳು ಬಗೆಹರಿಯುತ್ತವೆ. ಸುಭದ್ರ ಆಡಳಿತ ನೀಡಲು ಯಡಿಯೂರಪ್ಪನವರಿಗೆ ಸಹಕಾರ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ವರಿಷ್ಠರು ತಕ್ಷಣ ಸೂಚನೆ ನೀಡಲಿ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.

Home add -Advt

ಕೆ.ಎಸ್.ಈಶ್ವರಪ್ಪಗೆ ಸಿಎಂ ಸ್ಥಾನ ನೀಡಿ; ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

Related Articles

Back to top button