Sports

 *ಭಾರತ‌ ತಂಡಕ್ಕೆ ಗೆಲುವಿನ ಶಿವರಾತ್ರಿ* 

* *ಪಾಕಿಸ್ತಾನ ಎದುರು 61 ರನ್ ಗಳಿಂದ ಜಯ* 

 *ಕೊಲಂಬೊ:*  ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ( 77ರನ್, 40 ಎಸೆತ, 10 ಬೌಂಡರಿ, 3 ಸಿಕ್ಸರ್‌) ಬಿರುಸಿನ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟನಾತ್ಮಕ ‌ಹೋರಾಟದ ಫಲವಾಗಿ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 61  ರನ್ ಗಳಿಂದ ಮಣಿಸಿತು.  ಇದರೊಂದಿಗೆ ಐಸಿಸಿ  ಟೂರ್ನಿ ಗಳಲ್ಲಿ ಭಾರತ ತಂಡ ತನ್ನ ಪಾರಮ್ಯ ಮುಂದುವರಿಸಿತು.‌

ಪ್ರೇಮದಾಸ ಸ್ಟೇಡಿಯಂ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಸಾರಥ್ಯದ ಭಾರತ ತಂಡ 7  ವಿಕೆಟ್ ಗೆ 175 ರನ್ ಗಳಿಸಿತು. ಬಳಿಕ ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡ  18 ಓವರ್ ಗಳಲ್ಲಿ 114 ರನ್ ಗಳಿಗೆ ಸರ್ವಪತನ ಕಂಡಿತು. 

* *ಪಾಕಿಸ್ತಾನಕ್ಕೆ ಬೂಮ್ರಾ ಕಡಿವಾಣ* 

ಪಾಕಿಸ್ತಾನ ತಂಡಕ್ಕೆ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾ ಆರಂಭದಲ್ಲೆ ಕಡಿವಾಣ ಹೇರಿದರು. ಪಾಕಿಸ್ತಾನದ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ ಗಳು ಒಂದಂಕಿ ಮೊತ್ತಕ್ಕೆ ನಿರ್ಗಮಿಸಿದರು. ಉಸ್ಮಾನ್ ಖಾನ್ (44) ಏಕಾಂಗಿ ಹೋರಾಟ ನಡೆಸಿದರೂ ಅಕ್ಷರ್ ಪಟೇಲ್ ಡಗ್ ಔಟ್ ದಾರಿ ತೋರಿದರು. ಉಸ್ಮಾನ್ ನಿರ್ಗಮನದೊಂದಿಗೆ ಪಂದ್ಯ ಏಕಪಕ್ಷೀಯವಾಗಿ ಸಾಗಿತು. 

* *ಇಶಾನ್ ಕಿಶನ್ ಅಬ್ಬರ* 

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿದರು. ನಾಯಕ ಸೂರ್ಯಕುಮಾರ್ ಯಾದವ್ (32), ಶಿವಂ ದುಬೆ (27) ಬಿರುಸಿನ ಬ್ಯಾಟಿಂಗ್ ನೆರವಿನೊಂದಿಗೆ ಭಾರತ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button