ಸುಮಾರು 35 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 731 ಗ್ರಾಮ ಪಂಚಾಯಿತಿ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 381 ಸ್ಥಾನ ಪಡೆದಿದ್ದು, ಸುಮಾರು 35 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಬಿಜೆಪಿ ಬೆಂಬಲಿಗರು ಕೇವಲ 225 ಸ್ಥಾನ ಪಡೆದಿದ್ದಾರೆ. ಎಂಇಎಸ್ 125 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಶೇ.52ಕ್ಕಿಂತ ಹೆಚ್ಚು ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರ ಪಾಲಾಗಿವೆ. ಬಿಜೆಪಿ ಬೆಂಬಲಿಗರು ಕೇವಲ ಶೇ.30ರಷ್ಟು ಸ್ಥಾನಗಳನ್ನು ಪಡೆದಿದ್ದಾರೆ. ಎಂಇಎಸ್ ಶೇ.17ರಷ್ಟು ಸ್ಥಾನ ಗೆದ್ದಿದೆ.
ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನಿಖರವಾದ ಮಾಹಿತಿ ಸಂಗ್ರಹಿಸಿ ಮಾಧ್ಯಮಗಳಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಕರಡಿಗುದ್ದಿಯಲ್ಲಿ 8, ವಾಘವಾಡೆಯಲ್ಲಿ 12, ಮೋದಗಾದಲ್ಲಿ 15, ಅಂಬೆವಾಡಿಯಲ್ಲಿ 8, ಅರಳಿಕಟ್ಟಿಯಲ್ಲಿ 6, ಅಂಕಲಗಿಯಲ್ಲಿ 11, ಬಸ್ತವಾಡದಲ್ಲಿ 17, ಬಡಸ್ ದಲ್ಲಿ 6, ಬಾಳೆಕುಂದ್ರಿಯಲ್ಲಿ 12, ಬೆಂಡಿಗೇರಿಯಲ್ಲಿ 7 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿಗರು ಗೆದ್ದಿದ್ದಾರೆ.
ಬೆಕ್ಕಿನಕೇರಿಯಲ್ಲಿ 3, ಬೆನಕನಳ್ಳಿಯಲ್ಲಿ 23, ಬೆಳಗುಂದಿಯಲ್ಲಿ 8, ದೇಸೂರಲ್ಲಿ 4, ಹಲಗಾದಲ್ಲಿ 10, ಹಿಂಡಲಗಾದಲ್ಲಿ 7, ಹಿರೇಬಾಗೇವಾಡಿಯಲ್ಲಿ 23, ಕಂಗ್ರಾಳಿಯಲ್ಲಿ ಬಿಕೆಯಲ್ಲಿ 12, ಕಂಗ್ರಾಳಿ ಕೆಎಚ್ ನಲ್ಲಿ 4, ಕುದ್ರೆಮನಿಯಲ್ಲಿ 6, ಕಿಣಿಯೆದಲ್ಲಿ 9, ಕೆಕೆಕೊಪ್ಪದಲ್ಲಿ 12, ಉಚಗಾವಿಯಲ್ಲಿ 14, ತುಮ್ಮರಗುದ್ದಿಯಲ್ಲಿ 6 ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರ ಪಾಲಾಗಿವೆ.
ಮಂಡೊಳಿಯಲ್ಲಿ 6, ಮುತಗಾದಲ್ಲಿ 8, ಮುತ್ನಾಳದಲ್ಲಿ 6, ಮಾರಿಹಾಳದಲ್ಲಿ 11, ಮಾಸ್ತಮರ್ಡಿಯಲ್ಲಿ 9, ನಿಲಜಿಯಲ್ಲಿ 7, ನಂದಿಹಳ್ಳಿಯಲ್ಲಿ 5, ಸಂತಿಬಸ್ತವಾಡದಲ್ಲಿ 8, ಸಾಂಬ್ರಾದಲ್ಲಿ 15, ಸುಳಗಾ ಯುದಲ್ಲಿ 12, ಸುಳಗಾ ವೈ ದಲ್ಲಿ 3, ಸುಳೆಬಾವಿಯಲ್ಲಿ 18, ತಾರಿಹಾಳದಲ್ಲಿ 12, ತುರಮುರಿಯಲ್ಲಿ 8, ಕಣಗಾಂವ್ ದಲ್ಲಿ 2, ಬಾಳೆಕುಂದ್ರಿ ಕೆಎಚ್ ಲ್ಲಿ 8 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಗೆದ್ದಿದ್ದಾರೆ.
ಸಮಗ್ರ ವಿವರ ಇಲ್ಲಿದೆ –
ನಾವು ಶೇ.52.12ರಷ್ಟು ಸ್ಥಾನ ಗೆದ್ದಿದ್ದು, ನಿಖರ ಮಾಹಿತಿ ಸಂಗ್ರಹಿಸಿ ಬಿಡುಗಡೆ ಮಾಡಿದ್ದೇವೆ. ಆದರೆ ಬಿಜೆಪಿಯವರು ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳುವುದೇ ಅವರ ಸಂಸ್ಕೃತಿಯಾಗಿದೆ.
-ಲಕ್ಷ್ಮಿ ಹೆಬ್ಬಾಳಕರ್, ಶಾಸಕಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ