Kannada NewsKarnataka NewsLatest

​ 4 ದಶಕಗಳ ಬೇಡಿಕೆ ಈಡೇರಿಕೆ: ಸಾರ್ಥಕತೆ ಕಂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

 

 ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ಇಲ್ಲಿ ಎಷ್ಟು ಜನ ಸಾವು, ನೋವು ಕಂಡಿದ್ದಾರೋ ಗೊತ್ತಿಲ್ಲ. ಕಳೆದ 4 ದಶಕಗಳ ಅವರ ಕೂಗು ಅರಣ್ಯರೋಧನವಾಗಿತ್ತು. ಆದರೆ ಯಾವಾಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾಗಿ ಆಯ್ಕೆಯಾದರೋ ಅವರ ಆದ್ಯತೆಯ ಕೆಲಸಗಳಲ್ಲಿ ಇದೂ ಒಂದಾಗಿತ್ತು. ಅದು ಈಗ ಈಡೇರಿದೆ. ಗ್ರಾಮಸ್ಥರ ಕಂಗಳಲ್ಲಿ ಹರ್ಷದ ನೀರು ಜಿನುಗುತ್ತಿದ್ದರೆ, ಮನೆಯ ಮಗಳಾಗಿ ಶಾಸಕಿಯ ಹೃದಯ ಸಾರ್ಥಕತೆಯನ್ನು ಅನುಭವಿಸುತ್ತಿದೆ. ​
 ಅಪಘಾತ ವಲಯ (Accident Zone) ​ಎಂದೇ ಕರೆಯಲ್ಪಡುವ ಚಿನ್ನವಾರಿ ಗುಡ್ಡ (ಕೆಕೆ ಕೊಪ್ಪ) ಪ್ರದೇಶದಲ್ಲಿ ​​ತಡೆ​ಗೋ​​ಡೆಗಳಿರಲಿಲ್ಲ.
​ಈ ಪ್ರದೇಶವು ಮುಖ್ಯ ರಸ್ತೆಯ ಮೇಲಿದ್ದು, ಕೆಕೆ ಕೊಪ್ಪ, ಹಲಗಿಮರ್ಡಿ, ನಾಗೇರಹಾಳ, ನಾಗೇನಹಟ್ಟಿ, ಬಡಾಲ್ ಅಂಕಲಗಿ, ಹುಲಿಕವಿ ಮೊದಲಾದ ಗ್ರಾಮಗಳ ಜನರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.
 
ಇಲ್ಲಿ ಅಪಘಾತ ಎನ್ನುವುದು ಸಾಮಾನ್ಯ ಎನ್ನುವಂತಾಗಿತ್ತು.​ ​ಕೆಲವರು ಕೈ ಕಾಲುಗಳನ್ನು ಕಳೆದುಕೊಂಡು ಕತ್ತಲೆಯ ಜೀವನವನ್ನು ಅನುಭವಿಸುತ್ತಿದ್ದಾರೆ​. ಅನೇಕ ರೈತರು ​ಟ್ರ್ಯಾಕ್ಟರ್ ಮೂಲಕ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಸಂದರ್ಭದಲ್ಲಿ ಟ್ರಾಕ್ಟರ್ ಗಳು ಉರುಳಿ ಬಿದ್ದು ​ಸಂಕಷ್ಟ ಅನುಭವಿಸಿದ್ದಾರೆ.
ಕಳೆದ 40 ವರ್ಷಗಳಿಂದ​ ​ಈ ಎಲ್ಲ ಗ್ರಾಮಗಳ ಜನರ ಬಹುಮುಖ್ಯ​ ಬೇಡಿಕೆಯಾಗಿದ್ದ​​ ತಡೆಗೊಡೆ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣ​. ಆದರೆ ಈವರೆಗಿನ ಯಾವ ಜನಪ್ರತಿನಿಧಿಯೂ ಅದಕ್ಕೆ ಸ್ಪಂದಿಸಿರಲಿಲ್ಲ. ವಿಷಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗಮನಕ್ಕೆ ಬಂದ ತಕ್ಷಣ ತ್ವರಿತವಾಗಿ​ ಸ್ಪಂದಿಸಿದರು.​ ಭವಿಷ್ಯದಲ್ಲಿ​ ಇಲ್ಲಿ​ ಯಾವುದೇ ಪ್ರಾಣಹಾನಿಯಾ​ಗಬಾರದು ಎಂದು 4.5 ಕೋಟಿ ರೂ. ವೆಚ್ಚದಲ್ಲಿ ​ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಇದೀಗ ​ಕೋಳಿವಾಡ ಗ್ರಾಮದಿಂದ ಕೆಕೆ ಕೊಪ್ಪ ಗ್ರಾಮದವರೆಗೆ​ ರಸ್ತೆಯ ಡಾಂಬರೀಕರಣ ಹಾಗೂ ತಡೆಗೊಡೆಗಳನ್ನು ನಿರ್ಮಿಸಿಕೊಟ್ಟಿ​ದ್ದಾರೆ.
ಗ್ರಾಮದ ಜನರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ತುರ್ತು ಸ್ಪಂದನೆಗೆ ಮನಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. 
ಈಗ ಈ ರಸ್ತೆ ಮೇಲೆ ಎಲ್ಲ ಗ್ರಾಮಗಳ ಜನರ ಯಾವುದೇ ಭಯವಿಲ್ಲದೆ ಸರಾಗ ಹಾಗೂ ಸುಗಮವಾಗಿ ಸಾಗುತ್ತಿರುವುದನ್ನು ನೋಡಿ ಮನಸ್ಸಿಗೆ ತುಂಬಾ ಖುಷಿ ಎನಿಸುತ್ತಿದೆ​. ನಾನು ಶಾಸಕಿಯಾಗಿ ಕೈ​ಗೊಂಡ​ ಕೆಲಸಗಳು ಹಾಗೂ ತೆಗೆದುಕೊಳ್ಳುವ ಜವಾಬ್ದಾರಿಗಳು ನನಗೆ ತೃಪ್ತಿಯನ್ನು ತಂದುಕೊಟ್ಟಿವೆ. ಸದಾಕಾಲವೂ ಹೀಗೆಯೇ ನಿಮ್ಮ ಸೇವೆಯಲ್ಲಿ ನಿಮ್ಮ ಮನೆಯ ಮಗಳಾಗಿ ಸದಾ ನಿಮ್ಮ ಜೊತೆ​ ಇರುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button