Kannada NewsLatestNationalPolitics

*ತೆಲಂಗಾಣದಲ್ಲಿ ಮ್ಯಾಜಿಕ್ ಸಂಖ್ಯೆ ದಾಟಿದ ಕಾಂಗ್ರೆಸ್*

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ನಾಲ್ಕು ರಾಜ್ಯಗಳ ಚುನಾವಣಾ ಮತ ಎಣಿಕೆ ಕಾರ್ಯ ಚುರುಕುಗೊಂಡಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮ್ಯಾಜಿಕ್ ಸಂಖ್ಯೆ ದಾಟಿ ಮುನ್ನುಗ್ಗಿದೆ.

ಮತ ಎಣಿಕೆ ಆರಂಭವಾದಾಗಿನಿಂದ ಆಡಳಿತಾರೂಢ ಬಿ ಆರ್ ಎಸ್ ತೀವ್ರ ಹಿನ್ನಡೆಯಲ್ಲಿತ್ತು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಬಿ ಆರ್ ಎಸ್ ಅರ್ಧಶತಕ ಭಾರಿಸಿದ್ದು, ಮುನ್ನುಗ್ಗುತ್ತಿದೆ.

ಸದ್ಯ ತೆಲಂಗಾಣದಲ್ಲಿ 61 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಬಿಆರ್ ಎಸ್ 55 ಕ್ಷೆತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ತೆಲಂಗಾಣದಲ್ಲಿ ಕ್ಷಣ ಕ್ಷಣಕ್ಕೂ ಫಲಿತಾಂಶ ರೋಚಕ ತಿರುವಿನತ್ತ ಸಾಗುತ್ತಿದೆ.

Home add -Advt

ಇನ್ನೊಂದೆಡೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿ ನಿವಾಸದ ಬಳಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button