Kannada NewsKarnataka NewsLatest
*ಚಾಕೊಲೇಟ್ ಎಂದು ಮಾತ್ರೆ ತಿಂದ ಮಗು ಚಿಕಿತ್ಸೆ ಫಲಿಸದೇ ಸಾವು*

ಪ್ರಗತಿವಾಹಿನಿ ಸುದ್ದಿ: ಚಾಕೊಲೇಟ್ ಎಂದು ತಪ್ಪಾಗಿ ಭಾವಿಸಿ ಮಾತ್ರೆ ಸೇವಿಸಿದ್ದ ಮಗು ಸಾವನ್ನಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಇಲ್ಲಿನ ಕಡಬನಕಟ್ಟೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ನಾಲ್ಕು ವರ್ಷದ ಹೃತ್ವಿಕ್ ಮೃತ ಮಗು. ಕಳೆದ ನಾಲ್ಕುದಿನಗಳ ಹಿಂದೆ ಮಗು ಚಾಕೊಲೇಟ್ ಎಂದು ಮನೆಯಲ್ಲಿದ್ದ ಮಾತ್ರೆ ಸೇವಿಸಿದೆ.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಗುವನ್ನು ತಕ್ಷಣ ಬೆಂಗಳೂರಿಗೆ ಕರೆತಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮಗು ಮೃತಪಟ್ಟಿದೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.




