Cancer Hospital 2
Beereshwara 36
LaxmiTai 5

ಯಕ್ಸಂಬಾ ಬೀರೇಶ್ವರ ಸಹಕಾರಿ ಸಂಸ್ಥೆಗೆ 40.55 ಕೋಟಿ ರೂ. ಲಾಭ; ಇನ್ನೂ 57 ಶಾಖೆ ಆರಂಭಕ್ಕೆ ಅನುಮತಿ

Anvekar 3
GIT add 2024-1

ಚೇರಮನ್ ಜಯಾನಂದ ಜಾಧವ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ :
ಜೊಲ್ಲೆ ಗ್ರುಪ್ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಹಸಂಸ್ಥಾಪಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ವಿವಿಧೆಡೆ ೨೧೧ ಶಾಖೆಗಳನ್ನು ಪ್ರಾರಂಭಿಸಿ ಮೂರು ರಾಜ್ಯಗಳ ಕಾರ್ಯಕ್ಷೇತ್ರವನ್ನು ವ್ಯಾಪಿಸಿರುವ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸಾಯಟಿ ಲಿ., ಸಂಸ್ಥೆ (ಮಲ್ಟಿಸ್ಟೇಟ್)ಯು ೨೦೨೩-೨೪ ನೇ ಸಾಲಿನ ಆರ್ಥಿಕ ವರ್ಷದಲ್ಲಿ ೪೦ ಕೋಟಿ ೫೫ ಲಕ್ಷ ರೂಗಳಷ್ಟು ಲಾಭ ಗಳಿಸಿದೆ ಎಂದು ಸಂಸ್ಥೆಯ ಚೇರಮನ್ ಜಯಾನಂದ ಜಾಧವ ಹೇಳಿದರು.

ಯಕ್ಸಂಬಾ ಪಟ್ಟಣದ ಬೀರೇಶ್ವರ ನೂತನ ಆಡಳಿತ ಕಚೇರಿಯ ಸಭಾಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಆರ್ಥಿಕ ವಲಯದಲ್ಲಿ ಸಹಕಾರ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದರು ಸಹ ಬೀರೇಶ್ವರ ವರ್ಷದಿಂದ ವರ್ಷಕ್ಕೆ ಅರ್ಥಿಕವಾಗಿ ಸದೃಡವಾಗಿ ಬೆಳೆಯುತ್ತಿದೆ. ಕಳೆದ ವರ್ಷಕ್ಕಿಂತ ಶೇ ೧೫.೮೧ ರಷ್ಟು ಲಾಭಾಂಶದಲ್ಲಿ ಹೆಚ್ಚಳವಾಗಿದೆ ಎಂದರು.
ಸಹಕಾರಿಯು ೩,೭೮,೫೦೪ ಸದಸ್ಯರನ್ನು ಒಳಗೊಂಡು ೩೩,೦೧,೨೮,೯೦೦,೦೦ ಶೇರು ಬಂಡವಾಳ ೩೮೨೦ ಕೋಟಿ ೫೭ ಲಕ್ಷ ರೂಗಳಿಗೂ ಮೀರಿ ಠೇವು ಸಂಗ್ರಹ, ೪೧೮೭ ಕೋಟಿ ೬೬ ಲಕ್ಷ ರೂಗಳ ದುಡಿಯುವ ಬಂಡವಾಳ ಹೊಂದಿ ರಾಜ್ಯದಲ್ಲಿ ಅತ್ಯುತ್ತಮ ಸಹಕಾರಿಯಾಗಿ ಹೊರಹೊಮ್ಮಿದೆ ಎಂದರು.
ಶ್ರೀ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸಾಯಟಿ ಲಿ., ಸಂಸ್ಥೆ (ಮಲ್ಟಿಸ್ಟೇಟ್)ಯು ಅಂತರಾಜ್ಯ ಕಾಯ್ದೆಯಡಿ ಕರ್ನಾಟಕದಲ್ಲಿ ೧೬೬, ಮಹಾರಾಷ್ಟ್ರದಲ್ಲಿ ೪೩ ಹಾಗೂ ಗೋವಾದಲ್ಲಿ ೨ ಶಾಖೆಗಳು ಸೇರಿದಂತೆ ೨೧೧ ಶಾಖೆಗಳು ಸೇವೆಯನ್ನು ನೀಡುತ್ತಿದ್ದು ಬರುವ ದಿನಗಳಲ್ಲಿ ೫೭ ನೂತನ ಶಾಖೆಗಳನ್ನು ಪ್ರಾರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರ ಇಲಾಖೆ ಅನುಮತಿ ನೀಡಿದೆ ಎಂದರು.
ನೂತನ ಆಡಳಿತ ಕಚೇರಿ ಹಾಗೂ ಸ್ಟಾಪ್ ಕ್ವಾರ್ಟಸ್, ಬೀರೇಶ್ವರ ಸಭಾಗೃಹ
ಜೊಲ್ಲೆ ಗ್ರುಪ್ ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿರುವುದರಿಂದ ೨ ಅಂತಸ್ಥಿನ ನೂತನ ಆಡಳಿತ ಕಚೇರಿಯನ್ನು ಹಾಗೂ ನಮ್ಮ ಸಹಕಾರಿ ಹಿರಿಯ ೪೦ ಜನ ಸಿಬ್ಬಂದಿಗಳಿಗೆ ಸ್ಟಾಪ್ ಕ್ವಾರ್ಟಸ್ ಹಾಗೂ ಸಹಕಾರಿಯ ಸದಸ್ಯರ ಮಕ್ಕಳ ಮದುವೆ ಸೇರಿದಂತೆ ವಿವಿಧ ಸಭೆ ಸಮಾರಂಭಗಳಿಗೆ ೨ ಅಂತಸ್ಥಿನ ಹವಾನಿಯಂತ್ರಿತ ಬೀರೇಶ್ವರ ಸಭಾಭವನ ನಿರ್ಮಿಸಿದ್ದು ಸಭಾಭವನವನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ರವೀಂದ್ರ ಚೌಗಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Emergency Service

ವೈ.ಚೇರಮನ್ ಸಿದ್ರಾಮ ಗಡದೆ, ನಿಪ್ಪಾಣಿ ಹಾಲಸಿದ್ಧನಾಥ ಶುಗರ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ಲಕ್ಷ್ಮಣ ಕಬಾಡೆ, ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ, ರಮೇಶ ಕುಂಭಾರ, ಬಹದ್ದುರ ಗುರವ, ಎಸ್.ಕೆ.ಮಾನೆ, ಶಿವು ಡಬ್ಬನ್ನವರ, ಕಲ್ಲಪ್ಪಾ ಹುನ್ನರಗಿ, ಶೇಖರ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ಯಕ್ಸಂಬಾ ಬೀರೇಶ್ವರ ಸಹಕಾರಿ ಸಂಸ್ಥೆಗೆ 40.55 ಕೋಟಿ ರೂ. ಲಾಭ

Bottom Add3
Bottom Ad 2