Kannada NewsKarnataka NewsLatest
*ಚುನಾವಣಾ ಹಾಗೂ ಅಬಕಾರಿ ಅಧಿಕಾರಿಗಳ ದಾಳಿ; 98.52 ಕೋಟಿ ರೂಪಾಯಿ ಮೌಲ್ಯದ ಬೀಯರ್ ದಾಸ್ತಾನು ಜಪ್ತಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸಿರುವ ಅಧಿಕಾರಿಗಳು ಅಪಾರ ಪ್ರಮಾಣದ ಮದ್ಯ, ಹಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.
ಅನಾಮಧೇಯ ವ್ಯಕ್ತಿ ಕರೆ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 98.52 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಘಟಕದ ಅಧಿಕಾರಿಗಳು ದಿಢೀರ್ ದಾಳಿ ನದೆಸಿದ್ದಾರೆ. ಈ ವೇಳೆ ಸರ್ಕಾರದಿಂದ ಅನುಮತಿ ಪಡೆದದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೀಯರ್ ಸಂಗ್ರಹ ಮಾಡಿರುವುದು ಪತ್ತೆಯಾಗಿದೆ.
7000 ವಿವಿಧ ಬ್ರ್ಯಾಂಡ್ ನ ಬೀಯರ್ ಬಾಟಲ್ ಗಳ ಸಂಗ್ರಹ ಕಂಡುಬಂದಿದ್ದು, 98.52 ಕೋಟಿ ರೂಪಾಯಿ ಮೊತ್ತದ ಬೀಯರ್ ಜಪ್ತಿ ಮಾಡಿದ್ದಾರೆ. 17 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.