ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ನಾಗೇರಹಾಳ ಗ್ರಾಮದ ಒಳ ರಸ್ತೆಗಳ ಅಭಿವೃದ್ಧಿಗಾಗಿ 41 ಲಕ್ಷ ರೂ. ಮಂಜೂರು ಮಾಡಿಸಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು.
ಅರಿಷಿಣ ಕುಂಕುಮ:
ಇದೇ ವೇಳೆ ನಾಗೇರಹಾಳದ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಅರಿಷಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದರು.
ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಅರಿಶಿಣ ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿಯ ಕೆಲಸಗಳ ಕುರಿತು ಜನರಿಗೆ ತಿಳಿಸಲಾಗುತ್ತಿದೆ. ಕ್ಷೇತ್ರದ ಯಾವುದೇ ಗ್ರಾಮವನ್ನು ಕಡೆಗಣಿಸದೇ ಎಲ್ಲ ಗ್ರಾಮಗಳಲ್ಲಿಯೂ ಅಭಿವೃದ್ಧಿಯ ಕೆಲಸಗಳನ್ನು ಕೈಗೊಂಡು ಗ್ರಾಮಗಳ ಹಾಗೂ ಜನರ ಏಳಿಗೆಗಾಗಿ ಶ್ರಮಿಸಲಾಗುತ್ತಿದೆ ಎಂದರು.
ಕ್ಷೇತ್ರದ ಮನೆಯ ಮಗಳಾಗಿ ನೆರೆಹಾವಳಿಯಲ್ಲಿ, ಕೊರೊನಾ ಸಂದರ್ಭದಲ್ಲಿ ಎಲ್ಲರ ಕಷ್ಟಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದ್ದಾಗಿ ತಿಳಿಸಿದ ಅವರು, ‘ಜನಸೇವೆಯೇ ಜನಾರ್ದನ ಸೇವೆ’ ಎನ್ನುವಂತೆ ಕಷ್ಟ ಹೇಳಿಕೊಂಡು ಬರುವ ಎಲ್ಲರ ಸೇವೆಗಳಿಗೆ ಅಣಿಯಾಗಿರುವುದಾಗಿ ಹೇಳಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಬಸವಣ್ಣೆಪ್ಪ ಪಗಾದ, ಅಡವಯ್ಯ ಕುಲಕರ್ಣಿ, ಸಿದ್ದಪ್ಪ ಗುಂಡುಗೋಳ, ನಾಗಯ್ಯ ಹವಾಲ್ದಾರ್, ನಾಗಪ್ಪ ಯಳ್ಳೂರ, ಯಲ್ಲಪ್ಪ ದೊಡವಾಡಿ, ರವಿ ಅಂಗಡಿ, ಗಂಗಾಧರ್ ಯಳ್ಳೂರ್, ಚಂದ್ರಪ್ಪ ಅಕ್ಕಣ್ಣವರ, ನಾಗಪ್ಪ ದೊಡವಾಡಿ, ಕುಮಾರ ಹವಲ್ದಾರ್, ಸಂತೋಷ ದೊಡವಾಡಿ, ಬಸವರಾಜ ಜೇಡರ್, ಶಾಂತಾರಾಮ ಕಮ್ಮಾರ, ಬಸವರಾಜ ದೊಡವಾಡಿ, ಸೋಮು ನಂದಿ, ರುದ್ರಪ್ಪ ಚಿಣ್ಣನವರ, ಗ್ರಾಮದ ಯುವಕರು, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಉತ್ತಮ ನಟನೆಗಾಗಿ ಮಹೇಂದ್ರ ಮನೋತ್ ಗೆ ‘ವಿಶೇಷ ಸಮರ್ಪಣಾ ಪ್ರಶಸ್ತಿ:
https://pragati.taskdun.com/special-dedication-award-to-mahendra-manoth-for-best-acting/
ಜ.12ರಂದು ಬೆಳಗಾವಿಯಲ್ಲಿ ಬೃಹತ್ ಸಮ್ಮೇಳನ; 25 ಕೋಟಿ ರೂ. ಬಿಡುಗಡೆ: ಪ್ರಧಾನಿ ಮೋದಿ ಉದ್ಘಾಟನೆ
https://pragati.taskdun.com/big-convention-in-belgaum-on-jan-12-13-25-crore-rs-release-inauguration-by-pm-modi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ