Latest

ಉತ್ತಮ ನಟನೆಗಾಗಿ ಮಹೇಂದ್ರ ಮನೋತ್ ಗೆ ‘ವಿಶೇಷ ಸಮರ್ಪಣಾ ಪ್ರಶಸ್ತಿ:

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಆಲ್ಬಮ್ ನಲ್ಲಿನ ನಟನೆಗೆ ನಟ, ಸಮಾಜ ಸೇವಕ ಮಹೇಂದ್ರ ಮನೋತ್ ಅವರಿಗೆ ವಿಶೇಷ ಪ್ರಶಸ್ತಿ ಸಂದಿದೆ.

Home add -Advt

ಹುಬ್ಬಳ್ಳಿಯ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಮೂರು ದಿನಗಳ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ – 2022 ರಲ್ಲಿ ಚಿತ್ರನಟಿಯರಾದ ಪ್ರಿಯಾಂಕ ಉಪೇಂದ್ರ ಮತ್ತು ಭವ್ಯ ಅವರು ಮಹೇಂದ್ರ ಮನೋತ್ ಅವರಿಗೆ ಮನೋಜ್ಞ ನಟನೆಗಾಗಿ ಮುನೋತ್ ಅನುಪಸ್ಥಿತಿಯಲ್ಲಿ ನಿರ್ದೇಶಕ ಹರಿಹರನ್ ಬಿ.ಪಿ. ಅವರಿಗೆ ವಿಶೇಷ ಸಮರ್ಪಣಾ ಪ್ರಶಸ್ತಿ” ಪ್ರದಾನ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ನಿರ್ಮಿಸಿದ ‘ಹೆದರದಿರು ಓ ಮನಸೆ’ ಸಾಕ್ಷ್ಯ ಚಿತ್ರದ ಸಾಹಿತ್ಯಕ್ಕೆ ಇದೇ ಸಂದರ್ಭದಲ್ಲಿ ಮಹೇಂದ್ರ ಮನೋತ್ ಅವರಿಗೆ ಉತ್ತಮ ಸಾಹಿತ್ಯ ಪ್ರಶಸ್ತಿ ಸಂದಿದೆ.

ನಾಡ ಗೀತೆಗೆ ಸಂಗೀತಕಾರ ವಿಜಯಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಗಾಯಕ ಅಜಯ್ ವಾರಿಯರ್ ಧ್ವನಿ ಇದ್ದು, ಹರಿಹರನ್ ಬಿ.ಪಿ. ನಿರ್ದೇಶನದಲ್ಲಿ ಈ ಆಲ್ಬಮ್ ಮೂಡಿ ಬಂದಿದೆ.

ಅಕ್ರಮವಾಗಿ ಕೈಗಾರಿಕಾ ಭೂಮಿ ಸ್ವಾಧೀನ: ಸಚಿವ ಮುರಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತಕ್ಕೆ ದೂರು

https://pragati.taskdun.com/illegal-acquisition-of-industrial-land-complaint-to-l/

ಜ.12ರಂದು ಬೆಳಗಾವಿಯಲ್ಲಿ ಬೃಹತ್ ಸಮ್ಮೇಳನ; 25 ಕೋಟಿ ರೂ. ಬಿಡುಗಡೆ: ಪ್ರಧಾನಿ ಮೋದಿ ಉದ್ಘಾಟನೆ

https://pragati.taskdun.com/big-convention-in-belgaum-on-jan-12-13-25-crore-rs-release-inauguration-by-pm-modi/

Related Articles

Back to top button