2025ರ ವೇಳೆಗೆ ಪ್ರತಿ ವರ್ಷಕ್ಕೆ 44 ಕೋಟಿ ನ್ಯಾನೋ ಯೂರಿಯಾ ಉತ್ಪಾದನೆ; ಸಂಸದ ಈರಣ್ಣ ಕಡಾಡಿ ಮಾಹಿತಿ
ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ದೇಶದಲ್ಲಿ 9 ನ್ಯಾನೋ ಯೂರಿಯಾ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 2025 ರ ವೇಳೆಗೆ 13 ಉತ್ಪಾದನಾ ಘಟಕಗಳ ಮೂಲಕ ಪ್ರತಿ ವರ್ಷಕ್ಕೆ 44 ಕೋಟಿ ನ್ಯಾನೋ ಯೂರಿಯಾ ಬಾಟಲಿಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಪ್ರಾರಂಭವಾಗಲಿದೆ ಮತ್ತು ದೇಶದ ಬೇಡಿಕೆಯನ್ನು ಪೂರೈಸಿ ಹೆಚ್ಚುವರಿಯಾಗಿ ಹೊರದೇಶಗಳಿಗೂ ನ್ಯಾನೋ ಯೂರಿಯಾವನ್ನು ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರು ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ರಾಜ್ಯಸಭೆಯ ಚಳಿಗಾಲ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ದೇಶದಲ್ಲಿ ನ್ಯಾನೋ ಯೂರಿಯಾ ಉತ್ಪಾದನೆಯನ್ನು ದೇಶಿಯವಾಗಿ ಹೆಚ್ಚಿಸಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನಿ ನರೇಂದ್ರ ಮೋದಿಯವರು ಒಂದು ಹೊಸ ಪ್ರಯೋಗ ಮಾಡುವುದರ ಮೂಲಕ ಪರ್ಯಾಯ ಗೊಬ್ಬರದ ಕಡೆಗೆ ಗಮನ ನೀಡಿ ರಸಗೊಬ್ಬರ ಆಮದುಗಳ ಮೇಲೆ ಭಾರತದ ನಿರ್ಬರತೆಯನ್ನು ಕಡಿಮೆ ಮಾಡಲು ಭಾರತದಲ್ಲಿಯೇ ರಸಗೊಬ್ಬರಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ದಿಕ್ಕಿನಲ್ಲಿ ಹೆಜ್ಜೆಯಿಟ್ಟರು.
ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಮತ್ತು ಪ್ರತಿಭೆಗಳು ಹೇರಳವಾಗಿದ್ದು ಅದನ್ಮು ನಾವು ಉಪಯೋಗಿಸಿಕೊಳ್ಳುಬೇಕಾಗಿದೆ. ಹೀಗಾಗಿಯೇ ವಿದೇಶದಲ್ಲಿದ್ದ ಭಾರತದ ಒಬ್ಬ ಖ್ಯಾತ ವಿಜ್ಞಾನಿಯು ಭಾರತಕ್ಕೆ ಬಂದು ಮೋದಿಯವರನ್ನು ಭೇಟಿಯಾಗಿ ನ್ಯಾನ್ಯೋ ಯೂರಿಯಾ ಬಗ್ಗೆ ತಿಳಿಸಿ, ದೇಶದಲ್ಲಿ ನ್ಯಾನೋ ಯೂರಿಯಾವನ್ನು ಆವಿಸ್ಕರಿಸಿದರು. 500 ಎಂ.ಎಲ್ ಒಂದು ನ್ಯಾನೋ ಯೂರಿಯಾ ಬಾಟಲ್ 50 ಕೆ.ಜಿ. ಬ್ಯಾಗ್‌ನ ಡಿಎಪಿ ಗೊಬ್ಬರಕ್ಕೆ ಸಮವಾಗಿ ಕೆಲಸವನ್ನು ಮಾಡುತ್ತದೆ. ಈ ಒಂದು ಬಾಟಲ್ ಯೂರಿಯಾದಿಂದ ಬೆಳಗೆಳಿಗೆ ಪೋಷಕಾಂಶ ಮತ್ತು ನೈಟ್ರೋಜನ್ ದೊರೆಯುವಂತೆ ಮಾಡುತ್ತದೆ. ಈಗಾಗಲೇ ಇದರ ಕುರಿತು ಜಾಗೃತಿ ಪ್ರಚಾರಕ್ಕಾಗಿ ಪ್ರಧಾನ ಮಂತ್ರಿ ಮೋದಿ ಗ್ಯಾರಂಟಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಡ್ರೋನ್ ಸಾಧನದ ಮೂಲಕ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ನ್ಯಾನೋ ಯೂರಿಯಾದ ಉಪಯೋಗ ಹೇಗೆ ಆಗುತ್ತದೆ ಎಂದು ತಿಳಿಸಿ ಕೊಡಲಾಗುತ್ತಿದೆ ಎಂದರು.
ಗೋಶಾಲೆಗಳನ್ನು ಪ್ರೋತ್ಸಾಹಿಸಲು ಮತ್ತು ಗೋಶಾಲೆಗಳ ಗೊಬ್ಬರವನ್ನು ಯಾವ ರೀತಿ ಜೈವಿಕ ರಾಸಾಯನಿಕ ಗೊಬ್ಬರವನ್ನಾಗಿ ಉಪಯೋಗಿಸಿಕೊಳ್ಳಬೇಕೆಂದು ಜನರಲ್ಲಿ ಪ್ರಶ್ನೆ ಮೂಡಿದ್ದು, ಇದಕ್ಕಾಗಿ ಗೋವರ್ಧನ ಯೋಜನೆಯ ಮೂಲಕ ಖಾಸಗಿ ವ್ಯಕ್ತಿ, ಸಂಸ್ಥೆ, ಸಹಕಾರಿ ಸಂಘಗಳು ಗೋವುಗಳ ಗೊಬ್ಬರದಿಂದ ಗ್ಯಾಸ್ ಘಟಕಗಳನ್ನು ಸ್ಥಾಪಿಸಿ ದೇಶಕ್ಕೆ ಗ್ಯಾಸಗಳನ್ನು ಒದಗಿಸುವ ಕೆಲಸ ಮಾಡಬಹುದು, ಇದರಿಂದ ದೇಶದ ಜನರ ಬಳಕೆಗಾಗಿ ಅಡುಗೆ ಗ್ಯಾಸ್ ಮತ್ತು ಸ್ಲರಿ ದೊರೆಯುವದು. ಸ್ಲರಿಯನ್ನು ರಾಸಾಯನಿಕ ಗೊಬ್ಬರವನ್ನಾಗಿ ಪರಿವರ್ತಿಸಿ ಮಾರಾಟ ಮಾಡಬಹುದು. ಇದಕ್ಕಾಗಿ ಸರ್ಕಾರ ಮಾರುಕಟ್ಟೆ ಅಭಿವೃದ್ಧಿ ಯೋಜನೆಯನ್ನು ಕೂಡ ಪರಿಚಯಿಸಿದೆ. ಈ ಯೋಜನೆಗೆ ಸರ್ಕಾರ 1 ಕೆ.ಜಿಗೆ, 1.50 ಪೈಸೆ ಸಬ್ಸಿಡಿ ಕೂಡ ನೀಡುತ್ತಿದೆೆ. ಈ ರೀತಿಯಾಗಿ ಸರ್ಕಾರವು ರೈತರ ನೈಸರ್ಗಿಕ ಆಹಾರ ಪದ್ಧತಿ ಮತ್ತು ಜೈವಿಕ ಗೊಬ್ಬರದ ಉತ್ಪಾದನೆಗೆ ಆದ್ಯತೆ ನೀಡುತ್ತಿದೆ ಎಂದರು.
ಕೇAದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ 7.43 ಕೋಟಿ 500 ಎಂ.ಎಲ್ ನ್ಯಾನೋ ಯೂರಿಯಾ ಬಾಟಲ್ ವಹಿವಾಟು ಮಾಡಲಾಗಿದೆ. ಕೇಂದ್ರ ಸರ್ಕಾರವು 500 ಎಂ.ಎಲ್ ನ್ಯಾನೋ ಯೂರಿಯಾ ಬಾಟಲ್ ಉತ್ಪಾದನೆಗೆ 2,400 ರೂಪಾಯಿ ಖರ್ಚು ಮಾಡುತ್ತಿದ್ದು ಇದರ ಜೊತೆಗೆ 2,150 ರೂಪಾಯಿಗಳಷ್ಟು ಸಬ್ಸಿಡಿ ನೀಡಿ ಕೇವಲ 260 ರೂಪಾಯಿಗಳಿಗೆ ರೈತರಿಗೆ ದೊರೆಯುವಂತೆ ಮಾಡಲಾಗಿದೆ ಎಂದು ಸಚಿವರು ಉತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ