ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಂದ ಒಟ್ಟಾರೆ 45,29,250 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಕುರಿತು 36,352 ಪ್ರಕರಣಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ 240 ಪ್ರಕರಣಗಳು ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ಅಡಿಯಲ್ಲಿ 117 ಪ್ರಕರಣಗಳು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಕ್ಸಿಜನ್ ಹಾಗೂ ರೆಮಿಡಿಸಿವರ್ ಕುರಿತು ಒಂದು ಪ್ರಕರಣ ಹಾಗೂ ಇದುವರೆಗೆ 7,306 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
ಕಳೆದ 7 ದಿನಗಳಿಂದ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಕುರಿತು 6,043 ಪ್ರಕರಣಗಳು ಹಾಗೂ ಒಟ್ಟು 75,6700 ರೂ. ದಂಡ ಸಂಗ್ರಹಿಸಿಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಮರ್ಪಕ ಆಕ್ಸಿಜನ್ ಲಭ್ಯತೆ:
ಸಮರ್ಪಕವಾಗಿ ಅಶ್ಯಕತೆಗನುಸಾರವಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 15 ಕೆ.ಎಲ್. ಆಕ್ಷಿಜನ್ ಪೂರೈಕೆಯಾಗುತ್ತಿತ್ತು. ಈಗ ಸರ್ಕಾರದಿಂದ 24
ಕೆ.ಎಲ್. ಆಕ್ಸಿಜನ್ ಹಂಚಿಕೆಯಾಗಿದೆ. ಸ್ಥಳೀಯವಾಗಿ 3 ಸಂಸ್ಥೆಗಳಿಂದ 5 ಕೆ.ಎಲ್. ತಯಾರಿಕೆಯಾಗಿ
ಕ್ರಮ ಬದ್ಧವಾಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ.
ಕೋವಿಡ್-19 ವಾರ್ ರೂಂ ಮತ್ತು ಕೇರ್ ಸೆಂಟರ್ ಸ್ಥಾಪನೆ :
ಜಿಲ್ಲಾ ಕೇಂದ್ರದಲ್ಲಿ 1 ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಒಂದರಂತೆ ಕೋವಿಡ್ ವಾರ್ ರೂಂ
ಸ್ಥಾಪಿಸಲಾಗಿದೆ. ಅಲ್ಲಿ ಹೊಂ ಐಸೂಲೇಶನ್‌ದಲ್ಲಿ ಇರುವ ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ
ವಿಚಾರಿಸಲಾಗುತ್ತಿದೆ.
ಇವರಿಗೆ ಸಂಬಂಧಪಟ್ಟ ಪ್ರಥಮ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ ಇರುವುದರ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ
ಆಸ್ಪತ್ರೆ ಲಭ್ಯವಿರುವ ಬೆಡ್ ಗಳ ವಿವರಗಳನ್ನು ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಅಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಎಲ್ಲ ತಾಲೂಕಗಳಲ್ಲಿ ಒಟ್ಟು 24 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅವುಗಳಲ್ಲಿ ಒಟ್ಟು 1,233 ಹಾಸಿಗೆಗಳಿದ್ದು ,ಅದರಲ್ಲಿ ಒಟ್ಟು 601 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಒಟ್ಟು 632 ಹಾಸಿಗೆಗಳು ಲಭ್ಯವಿರುತ್ತವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಸಿಕೆ ಪೂರೈಕೆ:
ಲಸಿಕಾಕರಣದ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಗೆ 36,99,050 ಗುರಿ ನೀಡಲಾಗಿದೆ. ಇದರಲ್ಲಿ ಇಲ್ಲಿಯವರೆಗೆ 7,17,075 ಜನರಿಗೆ ಲಸಿಕೆ ನೀಡಲಾಗಿದೆ.
5,78,347 ಜನ ಮೊದಲನೇಯ ಡೋಸ್ ಪಡೆದುಕೊಂಡಿದ್ದಾರೆ. ಎರಡನೇಯ ಡೋಸ್ ಪಡೆದವರ ಸಂಖ್ಯೆ 1,38,728 ಆಗಿದೆ. 4,39,619 ಜನ ಎರಡನೇಯ ಡೋಸ್ ಪಡೆಯಬೇಕಾಗಿದೆ ಎಂದು ತಿಳಿಸಿದರು.
ಕೇಂದ್ರದಿಂದ 2,560 ವಯಲ್ ಹಾಗೂ ರಾಜ್ಯದಿಂದ 3,360 ವಯಲ್ ಕೋವ್ಯಾಕ್ಸಿನ ಲಸಿಕೆ ಪೂರೈಕೆಯಾಗಿದ್ದು, ಒಟ್ಟು 5,920 ವಯಲ್ ಲಸಿಕೆ ಪೂರೈಕೆ ಆಗಿದೆ.
ಅದೇ ರೀತಿ, ಕೇಂದ್ರದಿಂದ 6,310 ವಯಲ್ ಹಾಗೂ ರಾಜ್ಯದಿಂದ 8,850 ವಯಲ್ ಗಳಷ್ಟು ಕೋವಿಶಿಲ್ಡ ಲಸಿಕೆ ಪೂರೈಕೆ ಯಾಗಿದ್ದು, ಒಟ್ಟು 15,160 ವಯಲ್ ಕೋವಿಶಿಲ್ಡ ಲಸಿಕೆ ಪೂರೈಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾಹಿತಿ ನೀಡಿದರು.
18 ರಿಂದ 44 ವಯಸ್ಸಿನವರ ಗುರಿ 22,95,517 ಇದರಲ್ಲಿ14,986 ಲಸಿಕೆ ನೀಡಲಾಗಿದೆ.ಈ ಲಸಿಕಾಕರಣವನ್ನು ಮೇ.11 ರಿಂದ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಮಡಿಸಿವರ್ ಗಳ ಪೂರೈಕೆ :
ಇದೇ ಸಂದರ್ಭದಲ್ಲಿ , ರೆಮಡಿಸಿವರ್ ಪೂರೈಕೆಯ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿ,
ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಏ.1 ರಿಂದ ಮೇ.27 ರ ವರೆಗೆ 11,262 ರೆಮಡಿಸಿವರ್ ವಯಲ್‌ಗಳು
ಪೂರೈಕೆಯಾಗಿರುತ್ತವೆ.
ಇವುಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಒಟ್ಟು 7,986 ವಯಲ್‌ಗಳನ್ನು ನೀಡಲಾಗಿದೆ. ಸದ್ಯ 3,276 ವಯಲ್‌ಗಳು ಜಿಲ್ಲಾ ಉಗ್ರಾಣದಲ್ಲಿ ಲಭ್ಯವಿರುತ್ತವೆ.
ಅದೇ ರೀತಿ, ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಏ.1 ರಿಂದ ಮೇ.23 ರ ವರೆಗೆ 19,368 ರೆಮಡಿಸಿವರ್ ವಯಲ್‌ಗಳು ಪೂರೈಕೆಯಾಗಿರುತ್ತವೆ.
ರೆಮಿಡಿಸಿವಿರ್ ಗಾಗಿ ಆಸ್ಪತ್ರೆಯವರು ವೆಬ್ ಸೈಟ್ ಮೂಲಕ ನೋಂದಣಿ ಮಾಡಿದಾಗ ನೇರವಾಗಿ ಆಯಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ರೆಮಿಡಿಸಿವಿರ್ ಹಂಚಿಕೆ ಅನುಸಾರ ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಎಲ್ಲರಿಗೂ ರೆಮಿಡಿಸಿವಿರ್ ಅಗತ್ಯವಿರುವುದಿಲ್ಲ; ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಲಾಗುವುದು ಎಂದು ತಿಳಿಸಿದರು.
ಕೋವಿಡ್ -19 ಕುರಿತು ಅಂಕಿ ಅಂಶಗಳ ಮಾಹಿತಿ :
ಇನ್ನು, ಕೋವಿಡ್ -19 ಕುರಿತು ಅಂಕಿ ಅಂಶಗಳ ಮಾಹಿತಿಯನ್ನು ನೀಡುತ್ತಾ, ಮಾ.17 ರಿಂದ ಮೇ.27 ರ ವರೆಗೆ ಜಿಲ್ಲೆಯಲ್ಲಿ ಒಟ್ಟು 2,28,700 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ
34,381 ಜನರಲ್ಲಿ ಸೊಂಕು ದೃಢ (ಪಾಸಿಟಿವ್ )ಪಟ್ಟಿದೆ.
16,180 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 17,904 ಸಕ್ರಿಯವಾಗಿರುವ ಪ್ರಕರಣಗಳಿವೆ.
ಹೊಂ ಐಸೊಲೇಶನ್‌ದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 14,776 ಆಗಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 601 ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಜಿಲ್ಲೆಯಲ್ಲಿ ಕಡಿಮೆ ಕೋವಿಡ್ ಮರಣ ಪ್ರಮಾಣ:
ಕೋವಿಡ್ ಕಾರಣದಿಂದಾಗಿ 170 ಜನ ಮರಣ ಹೊಂದಿದ್ದಾರೆ. ಅಲ್ಲದೇ, ಸಕಾರಾತ್ಮಕ ಪ್ರಕರಣ ಶೇಕಡಾವಾರು (ಪಾಸಿಟಿವಿಟಿ ರೇಟ) ಕಳೆದ 10 ದಿವಸದಿಂದ 21.72% ಆಗಿದೆ.
ಗುಣಮುಖರಾದವರ ಪ್ರಮಾಣ ಶೇಕಡಾವಾರು
70.3 % ಆಗಿದ್ದು, ಮರಣ ಪ್ರಮಾಣ ಶೇಕಡಾವಾರು (ಕಳೆದ 10 ದಿವಸದಿಂದ) 0.87% ಆಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4,146 ಹಾಸಿಗೆಗಳು ಲಭ್ಯವಿವೆ.
ಕೋವಿಡ-19 ರೋಗಿಗಳಿಗೆ ಮೀಸಲಿಟ್ಟಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆಗಳು ಲಭ್ಯವಿದ್ದು ಇವುಗಳಲ್ಲಿ 2,357 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ