Belagavi NewsBelgaum NewsKannada NewsKarnataka NewsNationalSports
*4ನೇ ಮಿನಿ ಒಲಂಪಿಕ್ ಗೇಮ್ಸ್: ಜಿಲ್ಲೆಯ ವೇಟ್‌ಲಿಫ್ಟಿಂಗ್ ಕ್ರೀಡಾಪಟುಗಳಿಗೆ ಚಿನ್ನದ ಪದಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನಲ್ಲಿ ಅಕ್ಟೋಬರ 4 ಮತ್ತು 5 ರಂದು ಜರುಗಿದ 4ನೇ ಮಿನಿ ಒಲಂಪಿಕ್ ಗೇಮ್ಸ್ ನಲ್ಲಿ ನಡೆದ ವೇಟ್‌ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ಭಾಗವಹಿಸಿದ ಕ್ರೀಡಾಪಟುಗಳು ಚಿನ್ನದ ಪದಕ ಪಡೆದಿರುತ್ತಾರೆ.
ಬಾಲಕಿಯರಲ್ಲಿ ಅಕ್ಷರಾ, ಪ್ರಗತಿ ಪಾಟೀಲ, ಸಾನ್ವಿ ಯಲಜಿ, ವರ್ಷಾ ಭಜಂತ್ರಿ ಇವರುಗಳು ಚಿನ್ನದ ಪದಕ ಹಾಗೂ ಸಾಕ್ಷಿ ಜಕ್ಕನ್ನವರ ಕಂಚಿನ ಪದಕ ಮತ್ತು ಗುಡಿಯಾ ಪ್ರಜಾಪತ್, ಯಾನಿ ಸೊಳಂಕಿ ಇವರುಗಳು ಭಾಗವಹಿಸಿ 4ನೇ ಸ್ಥಾನ ಹಾಗೂ ಬಾಲಕರಲ್ಲಿ ತೇಜಸ್ ಸುನಗಾರ ಚಿನ್ನದ ಪದಕ, ಕಾರ್ತಿಕ ಅಗಸರ ಬೆಳ್ಳಿ ಪದಕ ಹಾಗೂ ದೇವಾಂಗ ಮನಮೋಡೆ ಕಂಚಿನ ಪದಕವನ್ನು ಗಳಿಸಿರುತ್ತಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಬಿ. ಶ್ರೀನಿವಾಸ್, ವೇಟ್‌ಲಿಫ್ಟಿಂಗ್ ತರಬೇತಿದಾರರಾದ ಸದಾನಂದ ಮಾಳಶೆಟ್ಟಿ, ದೈಹಿಕ ಶಿಕ್ಷಕರಾದ ಸ್ವಸ್ತಿಕಾ ಮೀರಜಕರ್ ಹಾಗೂ ಸಿಬ್ಬಂದಿ ವರ್ಗದವರು ಇವರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.



