ಪ್ರಗತಿವಾಹಿನಿ ಸುದ್ದಿ: 5 ಕೋಟಿ ಹಣ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಾಳೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮತದಾನಕ್ಕೂ ಕೆಲವೇ ಗಂಟೆಗಳ ಮೊದಲು ಹೋಟೆಲ್ ವೊಂದರಲ್ಲಿ ವಿನೋದ್ ತಾವಡೆ ಬಿಜೆಪಿಇ ಕಾರ್ಯಕರ್ತರಿಗೆ 5 ಕೋಟಿ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅವರು ತಂಗಿದ್ದ ಹೋಟೆಲ್ ಮೇಲೆ ದಾಳಿ ನದೆಸಿದ ಬಹುಜನ ವಿಕಾಸ್ ಅಘಾಡಿ ಪಕ್ಷದ ಕಾರ್ಯಕರ್ತರು, ಹಣ ಹಂಚುತ್ತಿದ್ದ ವೇಳೆಯೇ ವಿನೋದ್ ತಾವಡೆ ಅವರನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಹಣ ಹಂಚಿಕೆ ಮಾಡಿರುವ ಬಗ್ಗೆ ಉಲ್ಲೇಖವಿರುವ ಡೈರಿ ಕೂಡ ಪತ್ತೆಯಾಗಿದೆ. ಅಲ್ಲದೇ ಹಣ ಹಂಚಲಾಗುತ್ತಿದೆ ಎಂಬ ಬಗ್ಗೆ ಬಹುಜನ ವಿಕಾಸ ಅಘಡಿ ಪಕ್ಷದ ಕಾರ್ಯಕರ್ತರು ಹಣದ ಸಮೇತ ಮಾಧ್ಯಮಗಳಿಗೆ ಪ್ರದರ್ಶಿಸಿದ್ದಾರೆ.
ಈ ವೇಳೆ ಹೋಟೆಲ್ ಬಳಿ ಹೈಡ್ರಾಮಾ ನಡೆದಿದೆ. ಪೊಲೀಸರು ಮಧ್ಯಪ್ರದೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಹಣ ಹಂಚಿಕೆ ಪ್ರಕರಣ ಸಂಬಂಧ ವಿನೋದ್ ತಾವಡೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ