Kannada NewsKarnataka News

ಚಂದ್ರಮಾ ಬ್ಯಾಂಕ್, ಸಿದ್ಧಾರೂಢ ಮಠದಿಂದ ತಲಾ 5 ಲಕ್ಷ ರೂ.

ಚಂದ್ರಮಾ ಬ್ಯಾಂಕ್, ಸಿದ್ಧಾರೂಢ ಮಠದಿಂದ ತಲಾ 5 ಲಕ್ಷ ರೂ.

ಪ್ರಗತಿವಾಹಿನಿ ಸುದ್ದಿ, ಸವದತ್ತಿ:   ಸ್ವಕ್ಷೇತ್ರದ ನೊವಿನಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ  ಇತರರ ನೋವಿಗೆ ಸ್ಪಂದಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚಂದ್ರಮಾ ಬ್ಯಾಂಕ್ ವತಿಯಿಂದ 5 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಯಿತು ಎಂದು  ಶಾಸಕ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಆನಂದ ಚಂ ಮಾಮನಿ ಹೇಳಿದರು.

ರಾಜ್ಯದಲ್ಲಿ ಕಂಡರಿಯದ ಭೀಕರ ಜಲಪ್ರವಾಹದಿಂದ ರಾಜ್ಯದ ಜನತೆ ತೊಂದರೆಗೆ ಒಳಗಾಗಿದ್ದಾರೆ. ಇದನ್ನೆಲ್ಲ ಅರಿತು ಸವದತ್ತಿ ತಾಲೂಕಿನ ಅನೇಕ ಹಳ್ಳಿಗಳು ಜಲಾವೃತವಾಗಿ ಕ್ಷೇತ್ರದ ಅನೇಕರು ಮನೆ, ಆಸ್ತಿ, ಜಾನುವಾರ ಕಾಳು ಮನೆಯಲ್ಲಿಯ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಅವರಿಗೆಲ್ಲ ಪುನರ್ವಸತಿ ಪರಿಹಾರ ಕೊಡಿಸುವುದರ ಜೋತೆಗೆ ಹೆಚ್ಚಿನ ಪರಿಹಾರಕ್ಕಾಗಿ ಅವಿರತ ಪರಿಶ್ರಮ ಹಾಕುತ್ತಿದ್ದು ಅದರ ಜೊತೆಗೆ ರಾಜ್ಯದ ಇತರ ಸ್ಥಳಗಳಲ್ಲಿ ಉಂಟಾದ ಪ್ರವಾಹಕ್ಕೆ ತುತ್ತಾದ ಜನರಿಗೆ ಸವದತ್ತಿ ಚಂದ್ರಮಾ ಕೋ ಆಪ್ ಬ್ಯಾಂಕ್ ನಿಂದ ಅಲ್ಪ ಸಹಾಯವಾಗಲೆಂದು 5ಲಕ್ಷ ರೂಪಾಯಿಗಳ ಚೆಕ್ ನೀಡಿದ್ದೇವೆ ಎಂದರು.
ಅವರ ಜೊತೆಯಲ್ಲಿ ಚಂದ್ರಮಾ ಕೋ ಆಪ್ ಸೊಸೈಟಿ  ಮುಖ್ಯ ಪ್ರವರ್ತಕರಾದ
 ಉಮೇಶ ಕೊರಿಕೊಪ್ಪ, ಎಪಿಎಂಸಿ  ಅಧ್ಯಕ್ಷ ಜಗದೀಶ ಹಣಸಿ, ಮಾಜಿ ಅಧ್ಯಕ್ಷ ಪ್ರಭು ಪ್ರಭುನವರ, ಬಿಜೆಪಿ ಪಕ್ಷದ ಮುಖಂಡ ರಾಜು ನಿಡವಣಿ ಇದ್ದರು.

ಸಿದ್ಧಾರೂಢ ಮಠದಿಂದ

 ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ನವರನ್ನು ಜಗದ್ಗುರು ಶ್ರೀ ಸಿದ್ಧಾರೂಢ ಮಠದಿಂದ ಸನ್ಮಾನ  ಮಾಡಿ ಶ್ರೀ ಸಿದ್ಧಾರೂಢರ ಮೂರ್ತಿಯನ್ನು  ಕೊಟ್ಟು ಗೌರವಿಸಲಾಯಿತು. ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢರ ಮಠದಿಂದ ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ  ಐದು ಲಕ್ಷ ರೂಪಾಯಿಗಳ ಡಿಡಿ ನೀಡಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ಹುಬ್ಬಳ್ಳಿಯ ರೇಲ್ವೆ ನಿಲ್ದಾಣಕ್ಕೆ ಮತ್ತು ರೈಲ್ವೆಗೆ ಶ್ರೀ ಸಿದ್ಧಾರೂಢರ ಹೆಸರನ್ನು ನಾಮಕರಣ ಮಾಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ,  ಶ್ರೀಮಠದ ಚೇರಮನ್ನ  ಡಿ.ಡಿ ಮಾಳಗಿ, ಧರ್ಮದರ್ಶಿಗಳಾದ ಶಾಮಾನಂದ ಪೂಜಾರಿ, ಗಣಪತಿ ನಾಯಕ,   ಗೋಕಾಕದ ಅಶೋಕ ಪೂಜಾರಿ. ಐರಣಿಯ ಬಾಬಣ್ಣಾ ಶೆಟ್ಟರ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button