
5 ತಿಂಗಳ ಹಿಂದೆ ಅಪಘಾತಕ್ಕಿಡಾದ ಯುವಕನ ಸಾವು
ಪ್ರಗತಿವಾಹಿನಿ ಸುದ್ದಿ, ಅಗಸಗಿ :
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನಿಗೆ 5 ತಿಂಗಳಕಾಲ ಚಿಕಿತ್ಸೆ ನೀಡಿದರೂ ಉಳಿಸಿಕೊಳ್ಳಲಾಗಲಿಲ್ಲ. ಅಲ್ಲಿಂದಲೂ ಕೋಮಾದಲ್ಲೇ ಇದ್ದ ಯುವಕ ಇಂದು ಸಾವಿಗೀಡಾಗಿದ್ದಾನೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಯುವಕನೊಬ್ಬ 5 ತಿಂಗಳ ಹಿಂದೆ ದೇವಗಿರಿಯ ಹತ್ತಿರ ರಸ್ತೆಯಲ್ಲಿ ತೊಡಿದ್ದ ಗುಂಡಿಯಲ್ಲಿ ದ್ವಿಚಕ್ರ ವಾಹನ ಬಿದ್ದು ಅಪಘಾತಕ್ಕಿಡಾಗಿದ್ದರು. ಗಂಭಿರ ಗಾಯಗೊಂಡು ಕೋಮಾ ಸ್ಥಿತಿಗೆ ಜಾರಿದ ಯುವಕನಿಗೆ 5 ತಿಂಗಳುಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಸಾವಿಗಿಡಾಗಿದ್ದಾರೆ. ಮೃತರು ಪ್ರೀತಮ್ ಸುರೇಶ ಮಾಯಣ್ಣಾಚೆ (24). ಇವರು ಕಡೋಲಿ ಗ್ರಾಮದ ನಿವಾಸಿಯಾಗಿದ್ದು, ಇವರಿಗೆ ತಂದೆ, ತಾಯಿ, ಸಹೋದರ,ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ