
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಫ್ರಾನ್ಸ್ ನಿರ್ಮಿತ 5 ರಫೆಲ್ ಯುದ್ಧ ವಿಮಾನಗಳು ಹರ್ಯಾಣದ ಅಂಬಾಲ ಏರ್ ಬೇಸ್ ಗೆ ಸುರಕ್ಷಿತವಾಗಿ ಬಂದಿಳಿದಿವೆ. ಈ ಮೂಲಕ ಭಾರತೀಯ ಸೇನೆಯ ಹೊಸ ಇತಿಹಾಸ ಆರಂಭವಾದಂತಾಗಿದೆ.
ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ರಫೇಲ್ ಫೈಟರ್ ಜಟ್ ವಿಮಾನಗಳನ್ನು ಬರಮಾಡಿಕೊಂಡಿದ್ದಾರೆ. ಲ್ಯಾಂಡಿಂಗ್ ಆದ ಬಳಿಕ ವಾಟರ್ ಸೆಲ್ಯೂಟ್ ನೀಡಲಾಯಿತು.
ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿತ 5 ರಾಫೆಲ್ ಫೈಟರ್ ಜೆಟ್ ವಿಮಾನಗಳು ಇದಾಗಿದ್ದು, ಈ ಐದು ಯುದ್ಧ ವಿಮಾನಗಳ ಪೈಕಿ ಎರಡು ವಿಮಾನಗಳು 2 ಸೀಟರ್ ತರಬೇತಿ ವಿಮಾನಗಳಾಗಿದ್ದು, 3 ಸಿಂಗಲ್ ಸೀಟರ್ ಫೈಟರ್ ಜೆಟ್ ಗಳಾಗಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ರಕ್ಷಣಾ ಇತಿಹಾಸದಲ್ಲೇ ಹೊಸ ಯುಗ ಆರಂಭವಾಗಿದೆ. ಸೇನೆ ಇತಿಹಾಸದಲ್ಲಿ ಇದು ಕ್ರಾಂತಿಕಾರಿ. ಪ್ರಧಾನಿ ಮೋದಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದಾಗಿ ರಫೆಲ್ ಖರೀದಿ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಭಾರತದ ಬತ್ತಳಿಕೆಗೆ ರಫೆಲ್ ಬ್ರಹ್ಮಾಸ್ತ್ರ: ಪಾಕ್-ಚೀನಾಕ್ಕೆ ನಡುಕ