Karnataka News

*ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದು ಹೋದ ಟ್ರ್ಯಾಕ್ಟರ್: ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಮಕ್ಕಳ ಮೇಲೆ ಎಷ್ಟೇ ನಿಗಾವಹಿಸಿದರೂ ಕಡಿಮೆಯೇ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಮಣ್ಣು ತುಂಬಿದ್ದ ಟ್ರಾಕ್ಟರ್ ಹರಿದು ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ಪಾವಗಡ ತಾಲೂಕಿನ ತಿಮ್ಮನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. 5 ವರ್ಷದ ವರುಣ್ ಮೃತ ಬಾಲಕ. ಮನೆ ಮುಂದೆ ಬಾಲಕ ವರುಣ್ ಆಟವಾಡುತ್ತಿದ್ದ. ಈ ವೇಲೆ ಬಂದ ಟ್ರ್ಯಾಕ್ಟರ್ ಏಕಾಏಕಿ ಬಾಲಕನ ಮೇಲೆ ಹರಿದು ಹೋಗಿದೆ.

ವೈ.ಎನ್.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt

Related Articles

Back to top button