*ಹಣ ದುಪ್ಪಟ್ಟು ಮಾಡಿಕೊಡುವುದಾಗಿ ವಂಚಿಸಿದ್ದ ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ 50 ಲಕ್ಷ ರೂಪಾಯಿ ನಕಲಿ ನೋಟುಗಳು ಪತ್ತೆ*
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಹಣವನ್ನು ಮೂರು ಪಟ್ಟು ಹೆಚ್ಚು ಮಾಡಿಕೊಡುವುದಾಗಿ 17 ಲಕ್ಷ 66 ಸಾವಿರ ರೂಪಾಯಿ ವಂಚಿಸಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ನಕಲಿ ನೋಟು ಜಾಲವೊಂದು ಸಿಕ್ಕಿಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಮೂವರಿಗೆ ವ್ಯಕ್ತಿಯೋರ್ವ ಹಣ ತ್ರಿಬಲ್ ಮಾಡಿಕೊಡುವುದಾಗಿ ಹೇಳಿ 17 ಲಕ್ಷದ 66 ಸಾವಿರ ರೂಪಾಯಿ ವಂಚಿಸಿದ್ದ. ಚಿತ್ರದುರ್ಗದ ಜಯಲಕ್ಷ್ಮಿ ಬಡಾವಣೆ ನಿವಾಸಿ ಶಕರಗೌಡ ಎಂಬಾತ ಮಹಾರಾಷ್ಟ್ರ ಮೂಲದ ಮಹೇಶ್ ಕಾಟ್ಕರ್, ಸಚಿನ್ ಕಾಂಬಳೆ, ಅನಘ ಸುನೀಲ್ ಧವಳೆ ಎಂಬುವವರನ್ನು ವಂಚಿಸಿದ್ದ. ಕೊಟ್ಟ ಹಣವನ್ನು ವಾಪಾಸ್ ಕೇಳಿದಾಗ 100, 200, 500 ರೂಪಾಯಿ ನಕಲಿ ನೋಟು ಕೊಟ್ಟು ಸುಮ್ಮನಾಗಿದ್ದ.
ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಮೂವರೂ ಶಂಕರಗೌಡ ಬಳಿ ಹೋಗಿ ನಮ್ಮ ಹಣ ವಾಪಾಸ್ ಕೊಡುವಂತೆ ಕೇಳಿದ್ದರು. ಈ ವೇಳೆ ಮಹೇಶ್ ಕಾಟ್ಕರ್ ಎಂಬುವವರಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ವಂಚನೆಗೊಳಗಾದವರು ಚಿತ್ರದುರ್ಗದ ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಯನ್ನು ಬಂಧಿಸಿದ ಪೊಲಿಸರಿಗೆ ಆತನ ಕಾರಿನಲ್ಲಿ ಮೂರು ಟ್ರಂಕ್ ಗಳಲ್ಲಿ 50 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ. ನಕಲಿ ನೋಟನ್ನು ಸೀಜ್ ಮಾಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ